ನಮೀಬಿಯಾ ಏಕದಿನ ಸರಣಿ ವಶಪಡಿಸಿಕೊಂಡ ಕರ್ನಾಟಕ

ನಮೀಬಿಯಾ 13: ಕರ್ನಾಟಕ ತನ್ನ ನಮೀಬಿಯಾ ಪ್ರವಾಸವನ್ನು ಸರಣಿ ಜಯದೊಂದಿಗೆ ಮುಗಿಸಿದರೂ ಕೊನೆಯ ಪಂದ್ಯದಲ್ಲಿ ಸೋಲಿನ ಸಂಕಟಕ್ಕೆ ಸಿಲುಕಿತು. ಇದರೊಂದಿಗೆ ಸರಣಿ ಗೆಲುವಿನ ಅಂತರ 3-2ಕ್ಕೆ ಇಳಿಯಿತು. 

ರವಿವಾರದ 5ನೇ ಹಾಗೂ ಅಂತಿಮ ಪಂದ್ಯವನ್ನು ಆರ್. ಸಮಥರ್್ ಪಡೆ 5 ವಿಕೆಟ್ಗಳಿಂದ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕನರ್ಾಟಕ 48.1 ಓವರ್ಗಳಲ್ಲಿ 231ಕ್ಕೆ ಕುಸಿದರೆ, ನಮೀಬಿಯಾ 39.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿತು. 

ಮೊದಲ ಪಂದ್ಯವನ್ನು ಕನರ್ಾಟಕ 9 ವಿಕೆಟ್ಗಳಿಂದ ಜಯಿಸಿತ್ತು. ಬಳಿಕ 360 ರನ್ ಪೇರಿಸಿಯೂ 5 ವಿಕೆಟ್ ಸೋಲನುಭವಿಸಿತು. 3ನೇ ಪಂದ್ಯದಲ್ಲಿ ಎಲ್.ಆರ್. ಚೇತನ್ ಮತ್ತು ನಿಕಿನ್ ಜೋಸ್ ಶತಕದಿಂದ 9 ವಿಕೆಟ್ ಅಂತರದ ಜಯ ಸಾಧಿಸಿತು. 4ನೇ ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಆದರೆ ಈ ಅಂತರವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ.