ಕರ್ನಾಟಕ ಮಾದರ ಮಹಾಸಭಾ: ಸದಸ್ಯತ್ವ ಅಭಿಯಾನ ಸಭೆ

ಕರ್ನಾಟಕ ಮಾದರ ಮಹಾಸಭಾ: ಸದಸ್ಯತ್ವ ಅಭಿಯಾನ ಸಭೆ  Karnataka Model Mahasabha: Membership Drive Meeting


ತಾಳಿಕೋಟಿ  08: ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಕರ್ನಾಟಕ ಮಾದರ ಮಹಾಸಭಾ (ರಿ )ಸದಸ್ಯತ್ವ ಅಭಿಯಾನ ಸಭೆ ಶನಿವಾರ ಜರುಗಿತು.ಈ ಸಂದರ್ಭದಲ್ಲಿ ಹಡಗಿನಾಳ ಗ್ರಾಮದ ಶ್ರೀ ಚನ್ನಪ್ಪ ಕಟ್ಟಿಮನಿ ಹಾಗು ರವಿಚಂದ್ರ ಕಟ್ಟಿಮನಿ ಅವರು ಸದಸ್ಯತ್ವ ಪಡೆದರು. ಜಿಲ್ಲಾ ಸಂಘಟಕರಾದ ಶಂಕರ ಮಾದರ (ಸಾಸನೂರ) ಕರ್ನಾಟಕ ಮಾದರ ಮಹಾಸಭಾದ ಉದ್ದೇಶಗಳು ರಾಜಕೀಯ ಮತ್ತು ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಸಮುದಾಯನ್ನು ಅಭಿವೃದ್ಧಿ ಹೊಂದುವಂತೆ ಮಾಡುವುದಾಗಿದೆ ಎಂದು ತಿಳಿಸಿ ಕರ್ನಾಟಕ ಸರ್ಕಾರದ ಸಚಿವರು ಮಾದರ ಸಮುದಾಯ ಹಿರಿಯ ನಾಯಕರಾದ.ಕೆ. ಹೆಚ್ ಮುನಿಯಪ್ಪ ನವರು ಹಾಗು ಕೇಂದ್ರ ಮಾಜಿ ಸಚಿವರಾದ ನಾರಾಯಸ್ವಾಮಿ ಮತ್ತು ವಿಜಯಪುರ ಸಂಸದರಾದ ರಮೇಶ ಜೀಗಜಿಣಗಿ ರವರು ಹಾಗು ಮಾಜಿ ಸಚಿವರಾದ ಹೆಚ್ ಆಂಜನೇಯ ರವರು ಮಹಾಸಭಾದ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. 

 ಅದಕ್ಕಾಗಿ ಮಾದರ ಸಮಾಜದ ಎಲ್ಲಾ ಬಂಧುಗಳು ಸದಸ್ಯತ್ವ ಪಡೆಯಬೇಕೆಂದು ಕೇಳಿಕೊಂಡರು. ಸದಸ್ಯರಾದ ಬಸ್ಸು ಕಟ್ಟಿಮನಿ ಅವರು ಮಾತನಾಡಿ ಅಭಿಯಾನದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದರು. ಈ ಸಮಯದಲ್ಲಿ ಸಮಾಜದ ಪ್ರಮುಖರಾದ ಗೋಪಾಲ ಕಟ್ಟಿಮನಿ, ಹಣಮಂತ ಹಗರಗುಂಡ, ಬಸವರಾಜ ಸಾಸನೂರ, ಶೇಕಪ್ಪ ಕಾರಗನೂರ, ಮಾದೇಶ್ ನಾಗೂರ, ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ಸ್‌ ವಿತರಿಸಲಾಯಿತು. ಗ್ರಾಮದ ಹಿರಿಯರಾದ ನಿಂಗನಗೌಡ ದೇಸಾಯಿ ಶಿಕ್ಷಕಣದ ಕುರಿತು ಮಾತನಾಡಿದರು. ಮತ್ತು ಎಸ್ ಡಿ ಮ್ ಸಿ ಅಧ್ಯಕ್ಷರಾದ ರಮೇಶ್ ಮಾದರ ಅವರು ಅಧ್ಯಕ್ಷತೆ ವಹಿಸಿದ್ದರು.ಎಸ್ ಡಿ ಮ್ ಸಿ ಸದಸ್ಯರು ಮಲ್ಲಪ್ಪ ಗುಬ್ಯಾಡ ಮತ್ತು ಕರೆಪ್ಪ ಪೂಜಾರಿ ಇತರರು ಹಾಜರಿದ್ದರು.