ಕನ್ನಡ ಟಾಪರ್ ಆಶಾಬಾನು ನಾವಿಕ ಪ್ರತಿಷ್ಠಾನ ಗೌರವ
Kannada topper Ashabanu honoured by Navika Foundation
ಲೋಕದರ್ಶನ ವರದಿ
ಹೂವಿನ ಹಡಗಲಿ 06- ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ ಆಶಾಬಾನು ರವರಿಗೆ ಪಟ್ಟಣದ ನಾವಿಕ ಪ್ರತಿಷ್ಠಾನದ ವತಿಯಿಂದ ಗೌರವ ಸನ್ಮಾನ ನೆರೆವೇರಿಸಲಾಯಿತು.ಅನಂತ ಸ್ಟೋರ್ ನ ದಿವಂಗತ ಕರಣಂ ಪಂಪಾಪತಿ ರಾವ್ ಸ್ಮರಣಾರ್ಥ ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ದತ್ತಿ ಬಹುಮಾನ ನೀಡಿ ಗೌರವ ಸಮರೆ್ಣ ನೆರೆವೇರಿಸಿದರು.ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಗ್ರಾಮೀಣ ಪ್ರದೇಶದ ಕಡು ಬಡತನದಲ್ಲಿ ಜನಿಸಿ ಯಾವುದೇ ಕೋಚಿಂಗ್ ಕ್ಲಾಸ್ ಇಲ್ಲದೆ ಹೆಚ್ಚು ಅಂಕ ಗಳಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.ನಾವಿಕ ಪ್ರತಿಷ್ಠಾನದ ಅಧ್ಯಕ್ಷ ಕರಣಂ ನಾಗೇಶ್ವರರಾವ್ ಕಾರ್ಯದರ್ಶಿ ಶಶಿಕಾಂತ್ ಕೆ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಜೆ ಪ್ರಸನ್ನ ಕುಮಾರ್ ಗಾಯತ್ರಿ ಪಂಪಾಪತಿ ರಾವ್ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 