ಕನಕಗಿರಿ ಕನಕಾಚಲಪತಿ ರಥೋತ್ಸವ ಅದ್ದೂರಿ
Kanakagiri Kanakachalapati Chariot Festival is a grand affair
ಕನಕಗಿರಿ 12: ಪಟ್ಟಣದ ಧಾರ್ಮಿಕ ಕ್ಷೇತ್ರ ಮತ್ತು ದಕ್ಷಿಣ ಭಾರತದ ಹಾಗೂ ಐತಿಹಾಸಿಕ ಸುಪ್ರಸಿದ್ದ ನಾಡಿನ ಆರಾಧ್ಯ ದೈವ. ಶ್ರೀಕನಕಚಲ ನರಸಿಂಹಸ್ವಾಮಿ ರಥೋತ್ಸವವು ಬುಧವಾರ ಸಾಯಂಕಾಲ ಆರಂಭಗೊ0ಡ ರಥೋತ್ಸವವು ಅತ್ಯಂತ ವಿಜೃಂಭಣೆಯಿ0ದ ಸಾಗಿತು. ಐತಿಹಾಸಿಕ ರಥೋತ್ಸವಕ್ಕೆ ಲಕ್ಷಂತರ ಭಕ್ತರು ರಾಜಬೀದಿಯುದ್ದಕ್ಕೂ ಗೋವಿಂದನ ನಾಮ ಸ್ಮರಣೆ ಮಾಡುತ್ತಾ, ಭಕ್ತಿಪೂರ್ವಕ ಹೂಹಣ್ಣು, ಉತ್ತತ್ತಿ ಅರ್ಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು ತೇರಿನ ಕೆಲಸಗಾರರು ಹಾಗೂ ಗೊಲ್ಲ ಸಮುದಾಯದವರಿಂದ ಕೆಕೆ ಹಾಕುತ್ತಾ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬೀದಿಯಲ್ಲಿ ತೇರು ಬರುವ ಮುಂಚಯೇ ಪ.ಪಂವತಿಯಿಂದ ರಸ್ತೆಯುದ್ದಕ್ಕೂ ನೀರನ್ನು ಹಾಕಿದ್ದರು. ಅಕ್ಕ-ಪಕ್ಕದ ಮನೆಗಳ ಮಹಿಳೆಯರು ರಂಗು-ರ0ಗೀನ ರಂಗೋಲಿ ಚಿತ್ತಾರಗಳನ್ನು ಬಿಡಿಸಿದ್ದರು. ಕಳೆದ ಬುದವಾರದಿಂದ ಪ್ರಾರಂಭವಾಗಿದ್ದ 14ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಇಂದು ದಕ್ಷಿಣ ಭಾರತ ಮೊಟ್ಟ ಮೊದಲ ಮಹಾರಥೋತ್ಸವ ಶ್ರೀಕನಕಾಚಲಪತಿಯದ್ದು. ಆಗಾಗೀ ರಾಜ್ಯ ಮಾತ್ರವಲ್ಲದೇ ನೆರೆಯ ರಾಜಸ್ಥಾನ, ಆಂದ್ರ್ರದೇಶ,ಮಹಾರಾಷ್ಟೊ ಹಾಗೂ ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವರ್ಷನೀರಿಕ್ಷೆಗೂ ಮೀರಿ ರಥೋತ್ಸವ ನೋಡಲು ಜನಸಾಗರವೇ ಹರಿದು ಬಂದಿದ್ದು ವಿಶೇಷವಾಗಿತ್ತು. ಜಾತ್ರಾ ನಿಮಿತ್ತ ರಥಕ್ಕೆ ಭಕ್ತಾಧಿಗಳು ಭಾಜಾ ಮೇಳದೊಂದಿಗೆ ದೊಡ್ಡ-ದೊಡ್ಡ ಗಾತ್ರದ ಹೂವಿನ ಹಾರ ರಥಕ್ಕೆ ಅರ್ಿಸುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ತೇರು ಹೋಗುವ ಬೀದಿಯ ಮಾಳಿಗೆ ಹಾಗೂ ರಸ್ತೆ ಯುದ್ದಕ್ಕೂ ಎಲ್ಲೊಂದರಲ್ಲಿ ಭಕ್ತರು ರಥೋತ್ಸವನ್ನು ಕಾತುರದಿಂದ ನೋಡಿತ್ತಿದ್ದರು. ರಾಜಬೀದಿಯಲ್ಲಿ ಬಂದ ಭಕ್ತರಿಗೆ ಗ್ರಾಮಸ್ಥರು ತಂಪಾದ ಕುಡಿಯುವ ನೀರು, ಸಕ್ಕರೆ ಪಾನಕ, ಮಜ್ಜಿಗೆ ಪಾನೀಯವನ್ನು ನೀಡಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 