ಕಡಣಿ ಸೇತುವೆ ನಿರ್ಮಾಣ ಭೂಮಿ ಪೂಜೆ : ಜಾರಕಿಹೊಳಿ
Kadani Bridge Construction Bhoomi Puja: Jarakiholi
ಆಲಮೇಲ 26 : ತಾಲೂಕಿನ ಕಡಣಿ ಯಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಹೊಂದಿರುವ ಬೀಮಾ ನದಿ ಸೇತುವೆ ಅನೇಕ ವರ್ಷಗಳಿಂದ ನೆನಗುದ್ದಿಗೆ ಬಿದ್ದಿದ ಬ್ರಿಡ್ಜ್ ಇಂದಿನ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಮೃತ ಹಸ್ತದಿಂದ ಭೂಮಿ ಪೂಜಾ ನೆರವೇರಿತು. ಲೋಕೋಪಯೋಗಿ ಇಲಾಖೆ ಉಪಯೋಗ 2026 - 26ನೇ ಸಾಲಿನ ಲೆಕ್ಕ ಶೀರ್ಷಿಕೆ ಪ್ರಮುಖ ಸೇತುವೆಗಳು ಬಂಡವಾಳ ವೆಚ್ಚಗಳು ಅಡಿಯಲ್ಲಿ 44. 50 ಕೋಟಿ ಅನುದಾನ ಅಡಿಯಲ್ಲಿ ಪ್ರಾರಂಭಿಸಲಾಯಿತು. ಈ ಭಾಗದ ಜನರಿಗೆ ಅನುಕೂಲಕ್ಕಾಗಿ ಇಲ್ಲಿನ ಸ್ಥಳೀಯರು ಸೇತುವೆ ನಿರ್ಮಾಣದಿಂದ ಹರುಷ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳೀಯ ರೈತರು ಹಳೆ ಸೇತುವೆ ಗೇಟ್ ಅಳವಡಿಸುವ ಕುರಿತು ರೈತರು ಬಿಜಾಪುರ ಉಸ್ತುವಾರಿ ಸಚಿವರಾದ ಎಂ. ಬಿ ಪಾಟೀಲ್ ಅವರಿಗೆ ಮನವಿ ನೀಡಿದರು.
ಬೇಸಿಗೆ ಕಾಲದಲ್ಲಿ ಜಾಲವಾರುಗಳಿಗೆ ಕೃಷಿ ಚಟುವಟಿಕೆ ಸಂಪೂರ್ಣ ಭೀಮಾ ನದಿಯಾದ ಒಳಹರಿವು ನೀರಿನ ಮಟ್ಟ ಬೇಸಿಗೆಯಲ್ಲಿ ಕಡಿಮೆಯಾಗುವ ಕಾರಣ ಗೇಟ್ ಅಳವಡಿಸಬೇಕು ಸಚಿವರಲ್ಲಿ ಮನವಿ ಮಾಡಿಕೊಂಡರು. ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಅಲಮೇಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸಾಧಿಕ್ ಸುಂಬುಡ. ಕಡಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ ತಾವರಗೇರಿ. ಹನುಮಂತರಾಯ ಕಳಸಗೊಂಡ. ಭೋಗಣ್ಣ ಲಾಳಸಂಗಿ.ರಾಜು ವಡ್ಡರ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಯೋಗಿ ಕತ್ತಿ. ಈರಣ್ಣ ಸುತಾರ ಪ್ರಕಾಶ ಕಟ್ಟಿಮನಿ. ಅನೇಕ ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 