ಕಡಣಿ ಭೋಗೇಶ್ವರ ಕುಂಭಾಭಿಷೇಕ
Kadani Bhogeshwar Kumbhabhishek
ಆಲಮೇಲ 25: ತಾಲ್ಲೂಕಿನ ಕಡಣಿ ಗ್ರಾಮದ ಭೋಗಲಿಂಗೇಶ್ಚರ ಜಾತ್ರೆಯು ಮಾ.25ರಿಂದ 27ರ ವರೆಗೆ ನಡೆಯಲಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.
12ನೇ ಶತಮಾನದ ವಚನಕಾರ ಕೆಂಭಾವಿ ಭೋಗಣ್ಣ ಅಂತಿಮ ದಿನಗಳನ್ನು ಕಡಣಿ ಗ್ರಾಮದ ಭೀಮಾತಟದಲ್ಲಿ ಕಳೆದನೆಂದು ಹೇಳಲಾಗಿದೆ. ಅಲ್ಲಿ ವಿಶಾಲವಾದ ಭವ್ಯ ದೇಗುಲವಿದ್ದು ಪ್ರತಿವರ್ಷ ಯುಗಾದಿ ಅಮಾವಾಸ್ಯೆಯ 7ನೇ ದಿನದಿಂದ ಉತ್ಸವ ನಡೆಯುತ್ತದೆ.ಮಾರ್ಚ 4ರಿಂದ ಆರಂಭವಾದ ಶರಣಬಸವೇಶ್ವರ ಪುರಾಣವು ಮಹಾಮಂಗಲಗೊಳ್ಳುವದರಿಂದ ಜಾತ್ರೆಯು ನಡೆಯುತ್ತದೆ ಎಂದು ಕಮೀಟಿಯ ಸಂತೋಷ ಕ್ಷತ್ರಿ ತಿಳಿಸಿದ್ದಾರೆ.
ಕುಂಭಾಭಿಷೇಕ: ಶ್ರೀ ಚಂದ್ರಶೇಖರ್ ಶಿವಾಚಾರ್ಯರು ಹಿರೇಮಠ ಆಲಮೇಲ ಅಳ್ಳೊಳ್ಳಿ ಮಠ ಶ್ರೀಶೈಲ ಸ್ವಾಮೀಜಿಗಳು ಅನೇಕ ಶ್ರೀಗಳು ಭಾಗವಹಿಸಿದರು. ಮಾರ್ಚ 25ರಂದು ಬೆಳಿಗ್ಗೆ ಸಹಸ್ರಾರು ಸುಮಂಗಲೆಯರಿಂದ ಕುಂಭಾಭಿಷೇಕ ಮಹಿಳೆಯರು ಊರಿನ ಪ್ರಮುಖ ಬೀದಿಗಳ ಮುಖಾಂತರ ಶಂಕರಲಿಂಗ ದೇವಸ್ಥಾನಕ್ಕೆ ತಲುಪಿತು , ನಂತರ ಲಿಂಗಕ್ಕೆ ಬಿಲ್ವಾರ್ಚನೆ, ಧಾರ್ಮಿಕ ಆಚರಣೆಗಳು ನಡೆಯುತ್ತು .ಪಲ್ಲಕ್ಕಿ ಉತ್ಸವ: 26ರಂದು ರಾತ್ರಿ 8ಕ್ಕೆ ಭೋಗೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯುತ್ತದೆ, ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಪುರವಂತರು ಧಾರ್ಮಿಕ ಕೈಂಕರ್ಯದಲ್ಲಿ ಸೇವೆ ಸಲ್ಲಿಸುವರು. ಸುತ್ತಲಿನ ಹಳ್ಳಿಗಳ ಜನರು ಭಾಗವಹಿಸುವರು.ರಥೋತ್ಸವ: ಮಾರ್ಚ್ 27ರಂದು ಸಂಜೆ ರಥೋತ್ಸವ ಜರುಗಲಿದ್ದು, ಅಂದು ಮಧ್ಯಾಹ್ನ 11 ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯು ನಾಡಿನ ವಿವಿಧ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜರಗಲಿದೆ ಶಿವು ಬಿರಾದಾರ ಹೇಳಿದರು.ಅಂದು ಸಂಜೆ ಮಹಾರಾಷ್ಟ್ರ ಕರ್ನಾಟಕ ಜಂಗೀ ಪೈಲ್ವಾನ್ ರಿಂದ ಕುಸ್ತಿಗಳು ನಡೆಯುತ್ತವೆ.ಬುಧವಾರರಂದು ಕುಂಭಾಭಿಷೇಕ ನಂತರ ರಕ್ತದಾನ ಶಿಬಿರವನ್ನು ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಡಾ. ಉ.ಖ. ಪತ್ತಾರ. ಡಾ. ವರುಣ್ ಪಾಟೀಲ ಡಾ. ಖ. ಖ. ಬಾಗೇವಾಡಿ ತಾಲೂಕ ಆರೋಗ್ಯ ಅಧಿಕಾರಿಗಳು ಆಲಮೇಲ. ಕ್ಷೇತ್ರ ಆರೋಗ್ಯ ಅಧಿಕಾರಿಗಳು ಙ ಒ. ಪೂಜಾರಿ ಆಲಮೇಲ, ಶ್ರೀಹರಿ ಕುಲಕರ್ಣಿ, ಆರೋಗ್ಯ ಶಿಕ್ಷಣ ಅಧಿಕಾರಿಗಳು ಸಿಂದಗಿ.ಕ.ಙ.ಚೌಢಕಿ. ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳು. ಸಂದೇಶ್ ಜೋಗುರ್. ಮಾರತಂಡ ವಗ್ಯೆ. ಅರ್ಜುನ್ ರಾಥೋಡ್. ಹಾಗೂ ಸಮುದಾಯ ಆರೋಗ್ಯ ಕೇಂದ್ರ ಆಲಮೇಲ ಸಿಬ್ಬಂದಿಗಳು
ದನಗಳ ಜಾತ್ರ್ರೆ: ಪ್ರತಿವರ್ಷದಂತೆ ಈ ವರ್ಷವು ದನಗಳ ಜಾತ್ರೆ ಆಯೋಜಿಸಲಾಗಿದ್ದು, ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಭೋಗಲಿಂಗೇಶ್ವರ ಜಾತ್ರೆಯಲ್ಲಿ ರಕ್ತದಾನ ಶಿಬಿರ ಶ್ರಾವಣಿ ಸ್ಕೂಲ್ ಶರಣಯ್ಯ ಹಿರೇಮಠ ದಂಪತಿಗಳು ರಕ್ತದಾನ ಮಾಡಿದರು.

ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 