ಹ್ಯಾಕಥಾನ್ ಪ್ರಶಸ್ತಿ ಗೆದ್ದ ಕೆಎಲ್‌ಎಸ್ ಜಿಐಟಿ ವಿದ್ಯಾರ್ಥಿ ತಂಡ

ಬೆಳಗಾವಿ, 6: ಮೇ 1 ಮತ್ತು 2 ರಂದು ಆಯ್ ಸೆಕ್ ಸಹಯೋಗದೊಂದಿಗೆ ಗದಗದ ತೋಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಡೆಸಿದ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಕೆಎಲ್‌ಎಸ್ ಜಿಐಟಿ, ಕಂಪ್ಯೂಟರ್ ಸೈನ್ಸ್‌ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡ ಶ್ರೀರಾಮ್ ನಾಯಕ್, ಓಮ್ ಪೌಸ್ಕರ್, ಪ್ರಬಲ ಮತ್ತು ಪ್ರಥಮ ಪ್ರಶಸ್ತಿ  ಪತ್ರದೊಂದಿಗೆ 15,000 ರೂ. ಹಾಗೂ ಇನ್ನೊಂದು ತಂಡ ಗಣೇಶ್ ಕೂಗಜಿ , ಅವಿನಾಶ್ ಪಾವಸ್ಕರ್ , ಓಂ ವಾಸುದೇವ್ , ನೀರಜ್ ವೆರ್ಣೇಕರ್ ದ್ವಿತೀಯ ಸ್ಥಾನ 10,000 ರೂ. ಗಳ ನಗದು ಬಹುಮಾನವನ್ನು ಬಾಚಿಕೊಂಡರು.    

ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಒಟ್ಟು 30 ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ  ಭಾಗವಹಿಸಿದ್ದವು. ಈ ತಂಡಕ್ಕೆ ಪ್ರೊ.ಸಾಗರ ಪೂಜಾರ್ ಪ್ರೊ.ವಿದ್ಯಾಧೀಶ ಪಾಂಡುರಂಗಿ ಅವರು ಮಾರ್ಗದರ್ಶನ ನೀಡಿದ್ದರು.  

ಕೆ.ಎಲ್‌.ಎಸ್ ಮ್ಯಾನೇಜ್ಮೆಂಟ್, ಕೆಎಲ್‌ಎಸ್ ಜಿಐಟಿ ಪ್ರಾಚಾರ್ಯ ಡಾ ಎಂ ಎಸ ಪಾಟೀಲ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ.ಸತೀಶ್ ದೇಶಪಾಂಡೆ, ಡಾ. ಸಂಜೀವ್ ಸಣ್ಣಕ್ಕಿ  ವಿಭಾಗ ಮುಖ್ಯಸ್ಥರು,ಸಿಎಸ್‌ಇ, ಡಾ. ಶ್ವೇತಾ ಗೌಡರ್ ಮತ್ತು ಎಸಿಇ-ಸಿಎಸ್‌ಐ ಸಂಯೋಜಕಿ ಪ್ರೊ ಅಮೃತ ದೇಶಪಾಂಡೆ , ಪ್ರೊ ಜ್ಯೋತಿ ಇತರರು ತಂಡವನ್ನು ಅಭಿನಂದಿಸಿದರು 

ಡಾ ಎಂ ಎಸ ಪಾಟೀಲ, ಪ್ರೊ.ಸತೀಶ್ ದೇಶಪಾಂಡೆ, ಡಾ. ಸಂಜೀವ್ ಸಣ್ಣಕ್ಕಿ  ಡಾ. ಶ್ವೇತಾ ಗೌಡರ್ ಹಾಗೂ ಪ್ರಾಧ್ಯಾಪಕರು ವಿಜೇತ ವಿದ್ಯಾರ್ಥಿ ಗಳೊಂದಿಗೆ