ಕೆ.ಎಂ. ಆಸಿಫ್ ಮೋಕಾಶಿಗೆ ‘ರಾಷ್ಟ್ರೀಯ ಭೂಷಣ’ ಪ್ರಶಸ್ತಿ

ಕೆ.ಎಂ. ಆಸಿಫ್ ಮೋಕಾಶಿಗೆ ‘ರಾಷ್ಟ್ರೀಯ ಭೂಷಣ’ ಪ್ರಶಸ್ತಿ K.M. Asif Mokashi Honoured with ‘Rashtriya Bhushan’ Award

ಬೆಂಗಳೂರು: ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಸಂಘ, ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ ಸಂಭ್ರಮ-2026’ ಕಾರ್ಯಕ್ರಮದಲ್ಲಿ ಬೆಳಗಾವಿಯ ಖ್ಯಾತ ಸೋನಾಲಿಕಾ ಟ್ರ್ಯಾಕ್ಟರ್ ಮಾಲೀಕ ಹಾಗೂ ವಿತರಕ ಕೆ.ಎಂ. ಆಸಿಫ್ ಮೋಕಾಶಿ ಅವರಿಗೆ ‘ರಾಷ್ಟ್ರೀಯ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜಧಾನಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಸಿಫ್ ಮೋಕಾಶಿ ಅವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತೆ ಡಾ. ಸುಶೀಲಮ್ಮ ಅವರು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಹಾಗೂ ಪ್ರಸ್ತುತ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಖ್ಯಾತ ಗಾಯಕ ಶಶಿಧರ ಕೋಟೆ, ಸಂಸ್ಥೆಯ ಅಧ್ಯಕ್ಷ ಡಾ. ಗುಣವಂತ ಮಂಜುನಾಥ, ಡಾ. ಸುಕನ್ಯಾ ಹಿರೇಮಠ, ಖ್ಯಾತ ಚಲನಚಿತ್ರ ನಟಿ ಭೂಮಿಕಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.