ನೇಸರಗಿಯಲ್ಲಿ ಸಂಭ್ರಮದ ಶ್ರೀ ಗಣೇಶ ಚತುರ್ಥಿ

ನೇಸರಗಿಯಲ್ಲಿ ಸಂಭ್ರಮದ ಶ್ರೀ ಗಣೇಶ ಚತುರ್ಥಿ Joyous Sri Ganesh Chaturthi in Nesaragi


ನೇಸರಗಿ 15:  ಪ್ರತಿವರ್ಷದಂತೆ ಈ ವರ್ಷ ಸೋಮವಾರ ದಿನ ಗ್ರಾಮದ ಎಲ್ಲ ಕಡೆಗಳಲ್ಲಿ ಗಣೇಶ, ಗಣೇಶ ಮೊರಿಯಾ, ಗಣಪತಿ ಬಪ್ಪ ಮೋರಯಾ, ಪಟಾಕ್ಷಿ ಸದ್ದು, ಗಣೇಶನನ್ನು ಅಂಗಡಿಗಳಿಗೆ ಹೋಗಿ ಗಣಪತಿ ಪೂಜಿಸಿ ಮನೆಗೆ ಕರೆದುಕೊಂಡು ಬಂದು ಸಿಂಗರಿಸಿ, ವಿಶೇಷ ಪೂಜೆ ಮಾಡಿ ಪಟಾಕಿ ಸಿಡಿಸಿ, ನೈವೇದ್ಯ ಮಾಡಿ ಸಿಹಿ ತಿಂದು ಸಂಭ್ರಮಿಸಿ, ಮದ್ಯಾಹ್ನ ಗೋದಿ ಹುಗ್ಗಿ ಪ್ರಸಾದ ಮಾಡಿ, ಕುಟುಂಬದ ಎಲ್ಲರೂ ಭರ್ಜರಿಯಾಗಿ ವಿಧ ವಿಧವಾದ   ಪ್ರಸಾದ  ಸವಿದು ಪ್ರಥಮ ದಿನದ ಗಣೇಶ ಉತ್ಸವ ಅದ್ದೂರಿಯಾಗಿ  ಆಚರಿಸಿದರು.