ಬೆಳಗಾವಿ

ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು

ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು


ಗೋಕಾಕ  21: ಸಮಾಜದಲ್ಲಿ ಅಧಿಕಾರಿಗಳು ಹಾಗೂ ನಾಗರಿಕರು ಮಾಡುವ ತಪ್ಪುಗಳನ್ನು ತಿದ್ದಿ, ಜನರಿಗೆ ತಿಳಿಸಿ ಹೇಳುವ ಮಹತ್ವದ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಪತ್ರಕರ್ತರು ಪ್ರಾಮಾಣಿಕರಾಗಿರಬೇಕು ಎಂದು ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಟೀಪುವರ್ಧನ ಹೇಳಿದರು.  

ಆ.20ರಂದು ಗೋಕಾಕ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಗಜಾನನ ದೇವಸ್ಥಾನದಲ್ಲಿ ಗೋಕಾಕ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಭೋಜನ, ಶಾಲಾ ಮಕ್ಕಳಿಗೆ ಶಾಲೋಪಯೋಗಿ ವಸ್ತುಗಳ ವಿತರಣೆ ಹಾಗೂ ಪೌರಕಾರ್ಮಿಕರು ಮತ್ತು ಗಣ್ಯ ನಾಗರಿಕರಿಗೆ ಸನ್ಮಾನ ನೆರವೇರಿಸಲಾಯಿತು.  

ಶಿಂಗಳಾಪುರದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಜ್ಯ ಸಮಿತಿ ಸದಸ್ಯ ರಾಮಣ್ಣ ಈಟಿ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ. ಮಹಾಜನ, ಸತ್ತೆಪ್ಪಾ ಕರೇವಾಡಿ, ರಮೇಶ್ ಮಾದರ, ಬಸವರಾಜ ಅಂಬಲಿ, ಬಾಲಚಂದ್ರ ಬನವಿ ಸೇರಿದಂತೆ ಹಲವರು ಮಾತನಾಡಿ, ಗೋಕಾಕ ತಾಲೂಕು ಪತ್ರಕರ್ತರ ಸಂಘದ ಜನೋಪಯೋಗಿ ಕಾರ್ಯಗಳನ್ನು ಶ್ಲಾಘಿಸಿದರು.  

ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವೃಷಭೇಂದ್ರ ಹಿರೇಮಠ, ತಾಲೂಕು ಅಧ್ಯಕ್ಷ ಮಹಾಲಿಂಗ ಮಾಡಲಗಿ, ಕಾರ್ಯದರ್ಶಿ ಶ್ರೀರಂಗ ಕಾಳೆ, ಜಹಾಂಗೀರ್ ಜಮಾದಾರ, ನಜೀರ್, ಶಿವಲಿಂಗ ಅಂಬಲಿ, ಲಕ್ಷ್ಮಣ ದುಂಡಪ್ಪ ರಡ್ಡಿ, ಮುತ್ತೆಪ್ಪ ಕಸ್ತೂರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೂಗಾರ ಕಾರ್ಯಕ್ರಮ ನಿರೂಪಿಸಿದರು.  

ಗುರುರಾಜ ಕಾಳೆ, ರಜನಿಕಾಂತ ಮಾಳೋದೆ, ಗೌಡರ ಶಿವಲಿಂಗ ಅಂಬಲಿ, ದುಂಡಪ್ಪ ರಡ್ಡಿ, ಕಿರಣ ಶಿವಾಜಿ, ಲಕ್ಷ್ಮಣ ಕೆಳಗಡೆ ಸೇರಿದಂತೆ ನೂರಾರು ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ