ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ: ನಾಗೇಂದ್ರ ಕೊಳಶೆಟ್ಟಿ

ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ: ನಾಗೇಂದ್ರ ಕೊಳಶೆಟ್ಟಿ Journalists are the fourth pillar of the Constitution: Nagendra Kolashetti

ಲೋಕದರ್ಶನ ವರದಿ   

ಇಂಡಿ 05: ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಂಡಿ ತಹಶೀಲದಾರ ನಾಗೇಂದ್ರ ಕೊಳಶೆಟ್ಟಿ ಅವರು  ಪತ್ರಿಕೋದ್ಯಮವು ನಮ್ಮ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಅತ್ಯಂತ ಪ್ರಬಲವಾದ ನಾಲ್ಕನೇ ಅಂಗವಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ, ತಪ್ಪುಗಳನ್ನು ತಿದ್ದುವಲ್ಲಿ ಮತ್ತು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪತ್ರಕರ್ತರ ಜವಾಬ್ದಾರಿ ಹಾಗೂ ಕಠಿಣ ಶ್ರಮ ಹಿರಿದಾದುದು ಎಂದು ಇಂಡಿ ತಹಶೀಲದಾರ ನಾಗೇಂದ್ರ ಕೊಳಶೆಟ್ಟಿ ಅವರು ಹೇಳಿದರು. 

ನಾದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿದಂಬರ ಬಂಡಗರ ಅವರು ಮಾತನಾಡಿ ಪತ್ರಕರ್ತರ ಕರ್ತವ್ಯದ ಕುರಿತು ವಿವರವಾಗಿ ಮಾತನಾಡಿದರು. ಇಂಡಿಯ ಗುರುಭವನದಲ್ಲಿ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.ಇದೇ ವೇಳೆ ಮಾತನಾಡಿದ ಇಂಡಿ ತಾಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿ ಮಹಾದೇವಪ್ಪ ಏವೂರ್ ಅವರು,

ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ದೊಡ್ಡದಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಪತ್ರಿಕೆಗಳು ಪ್ರಮುಖ ಕೊಂಡಿಯಾಗಿವೆ. ಪತ್ರಕರ್ತರು ಸದಾ ಜನಪರ ಕಾಳಜಿಯೊಂದಿಗೆ ನಿಷ್ಪಕ್ಷಪಾತ ವರದಿಗಾರಿಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.