ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ ನಿವೃತ್ತಿ
Jayanand Hiremath of Public Works Department retires
ಅಥಣಿ, 02 : ಲೋಕೋಪಯೋಗಿ ಇಲಾಖೆಯ ಅಥಣಿ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯನಿರ್ವಹಿಸಿ ವಯೋ ಸಹಜ ನಿವೃತ್ತಿಯಾದ ಜಯಾನಂದ ಹಿರೇಮಠರನ್ನು ಸರಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆದಾರರು ಆತ್ಮೀಯವಾಗಿ ಸತ್ಕರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಾನಂದ ಹಿರೇಮಠರೊಂದಿಗೆ ಕಾರ್ಯನಿರ್ವಹಿಸಿದ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, 40 ವರ್ಷಗಳ ಸುಧೀರ್ಘ ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಜಯಾನಂದ ಹಿರೇಮಠರ ಸ್ವಭಾವ ಅತ್ಯಂತ ಮೃದುವಾಗಿತ್ತು, ಎಲ್ಲರೊಂದಿಗೆ ಬೆರೆತು ಇಲಾಖೆಯ ಕಾರ್ಯನಿರ್ವಹಿಸಿದ್ದರು ಹೀಗಾಗಿಯೇ ಅವರು ಎಲ್ಲರ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ದರು ಎಂದು ಹೇಳಿದರು.
ತಮ್ಮ ಇಲಾಖೆಯ ಕಾರ್ಯದೊಂದಿಗೆ ಇತರ ಇಲಾಖೆಯ ಅಧಿಕಾರಿಗಳಿಗೂ ಅಗತ್ಯ ಬಿದ್ದಾಗ ಮಾರ್ಗದರ್ಶನ ಕೂಡ ನೀಡಿದ್ದಾರೆ. ಶಾಂತ ಸ್ವಭಾವದ ಇವರು ಕಛೇರಿಯ ಕೆಲಸ, ಕಾರ್ಯಗಳೊಂದಿಗೆ ತಮ್ಮ ಕುಟುಂಬಕ್ಕೂ ಸಮಯ ನೀಡುವ ಮೂಲಕ ಆದರ್ಶ ಪತಿಯಾಗಿ, ತಂದೆಯಾಗಿ, ಸಹೋದರನಾಗಿದ್ದಾರೆ ಎಂದ ಅವರು ಮುಂದಿನ ಅವರ ನಿವೃತ್ತಿ ಜೀವನ ಉತ್ತಮವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಜಯಾನಂದ ಹಿರೇಮಠ, ಸರಕಾರಿ ನೌಕರಿಯಲ್ಲಿ ಅನೇಕ ಸ್ಥಳಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಜೊತೆಗೆ ಕಾರ್ಯನಿರ್ವಹಿಸಿದ ಅಧಿಕಾರಿ ವರ್ಗ, ಸಿಬ್ಬಂದಿಗಳು ಕೂಡ ಸಹಕಾರ ನೀಡಿದ್ದರಿಂದಲೇ ನಾನು ಸರಕಾರಿ ನೌಕರಿಯಲ್ಲಿ 40 ವರ್ಷ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಾದ ವೀರಣ್ಣಾ ವಾಲಿ, ರವೀಂದ್ರ ಮೂರ್ಗಾಲಿ, ಘೂಳಪ್ಪ ಗೌಡಪ್ಪನವರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ನಿವೃತ್ತ ಅಧಿಕಾರಿಗಳಾದ ಶ್ರೀಕಾಂತ ಮಾಕಾಣಿ, ಶೇಖರ ಕರಬಸಪ್ಪಗೋಳ, ಶಿವಲಿಂಗ ಹುಕ್ಕೇರಿ, ಗುತ್ತಿಗೆದಾರ ರಾಜು ಆಲಬಾಳ ಮತ್ತು ಸೇರಿದಂತೆ ಅಧ್ಯಕ್ಷತೆ ವಹಿಸಿದ್ದ ಲೋಕೋಪಯೋಗಿ ಇಲಾಖೆಯ ಮಲ್ಲಿಕಾರ್ಜುನ ಮಗದುಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಮ ಧರಿಗೌಡರ, ಚಿಕ್ಕ ನೀರಾವರಿ ಇಲಾಖೆಯ ಪ್ರವೀಣ ಪಾಟೀಲ, ಲೋಕೋಪಯೋಗಿ ಇಲಾಖೆಯ ಪ್ರವೀಣ ಸೂರ್ಯವಂಶಿ, ವಾಸು ಕುಲಕರ್ಣಿ, ಅಶ್ವಿನಿ ಮೆಣಸಂಗಿ ಸೇರಿದಂತೆ ಹಿರೇಮಠರ ಕುಟುಂಬಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 