ಹೂವಿನ ಹಡಗಲಿ

ಜನೌಷಧಿ ಬಂದ್ ಕ್ರಮ ಸರಿಯಲ್ಲ: ಎಚ್ ಪೂಜಪ್ಪ

ಜನೌಷಧಿ ಬಂದ್ ಕ್ರಮ ಸರಿಯಲ್ಲ: ಎಚ್ ಪೂಜಪ್ಪ

ಹೂವಿನ ಹಡಗಲಿ 01: ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಬಂದ್ ಮಾಡುವ ಕ್ರಮ ಸರಿಯಲ್ಲ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಎಚ್ ಪೂಜಪ್ಪ ಹೇಳಿದರು. 

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಶುಕ್ರವಾರ ಭಾರತೀಯ ಜನತಾ ಪಕ್ಷ ಹೂವಿನ ಹಡಗಲಿ ಮಂಡಲದ ವತಿಯಿಂದ ಜನ ಓಷಧಿ ಕೇಂದ್ರಗಳನ್ನು ಬಂದ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ  ಸರ್ಕಾರಿ ಆಸ್ಪತ್ರೆಯ ಹೊರಗಡೆ ಕಪ್ಪು ಪಟ್ಟಿ ಧರಿಸುವ ಮೂಲಕ  ಪ್ರತಿಭಟಿಸಲಾಯಿತು.ಬಡವರಿಗೆ ವರದಾನ ಆಗಿರುವ ಜನ ಸಾಮಾನ್ಯರ ಆರೋಗ್ಯದ  ಬಗ್ಗೆ ಕಾಳಜಿ ಇದ್ದಲ್ಲಿ ಈ ಕೂಡಲೇ ರಾಜ್ಯ ಸರ್ಕಾರ ಪುನಃ -ಆರಂಭಿಸಬೇಕು ಎಂದು ಒತ್ತಾಯಿಸಿದರು. 

 ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಪೂಜಾರ್ ಮಲ್ಲಿಕಾರ್ಜುನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲಿನಂತೆ ಈ ಸೌಲಭ್ಯ ಮುಂದುವರೆಸಬೇಕು ಎಂದು ತಿಳಿಸಿದರು. ಮುಖಂಡರಾದ ಬೀರಬ್ಬಿ ಬಸಣ್ಣ,ಸಿರಾಜ ಬಾವಿಹಳ್ಳಿ, ಐನಳ್ಳಿ ಭಾಗ್ಯಮ್ಮ ಮೀರಾಬಾಯಿ, ಪುಟಾಣಿ ಬಸವರಾಜ್ ಪುನೀತ್ ದೊಡ್ಡನಿ ಲಂಕೇಶ್ ನಾಯಕ್ ಆರಿ​‍್ಟ.ನಾಗರಾಜ್, ಆಂಜನೇಯ ಧಾರವಾಡ, ಬಸವರಾಜ್ ವಕೀಲರು ವಕೀಲರಾದ ಮಂಜುನಾಥ ಶಿವಕುಮಾರ್ ಹಾಗೂ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ