ಜನತಾ ಬ್ಯಾಂಕ್ ಸಾಮಾಜಿಕ ಸೇವೆಗೆ ಆದ್ಯತೆ
Janata Bank Prioritizes Social Service
ಲೋಕದರ್ಶನ ವರದಿ
ಹಾರೂಗೇರಿ 24 : ಜನತಾ ಬ್ಯಾಂಕ್ ಡಿ.ಬಿ.ಆರ್. ಪಾಟೀಲರ ಸಮಾಜ ಸೇವೆಯ ಸಂಕಲ್ಪದ ಫಲವಾಗಿ ರೂಪುಗೊಂಡಿದ್ದು, ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬ್ಯಾಂಕ್ಗೆ ಕೊಡುಗೆ ನೀಡಬೇಕು ಎಂದು ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಹೇಳಿದರು. ಪಟ್ಟಣದ ಜನತಾ ಸಹಕಾರ ಬ್ಯಾಂಕ್ನ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕ್ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಭೀಮಗೊಂಡ ಸಾತಪ್ಪ ಕರ್ಣವಾಡಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಸಮಾಜಮುಖಿ ಚಿಂತನೆಗಳಿಂದ ಜನತಾ ಬ್ಯಾಂಕ್ ಜನರ ಮನ ಗೆದ್ದಿದೆ. ಬ್ಯಾಂಕ್ನ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಅವರು ಹೇಳಿದರು.
ನೂತನ ಉಪಾಧ್ಯಕ್ಷ ಭೀಮಗೊಂಡ ಕರ್ಣವಾಡಿ ಮಾತನಾಡಿ, ಅಧ್ಯಕ್ಷ ರಾಜಶೇಖರ ಪಾಟೀಲರ ದಕ್ಷ ಆಡಳಿತದಲ್ಲಿ ಬ್ಯಾಂಕ್ ಸಾಧನೆಯ ಹೊಸ ದಾಖಲೆ ಬರೆಯುತ್ತಿದೆ. ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಬ್ಯಾಂಕ್ ಮತ್ತಷ್ಟು ಮುನ್ನಡೆಯಲಿದೆ ಎಂದರು. ನಿರ್ದೇಶಕರಾದ ಪ್ರಕಾಶ ಕಶೆಟ್ಟಿ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಜೀವ ಅವಕ್ಕನವರ್, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಭಾವಿ, ಅಮೃತಾ ಮುಂಗುರವಾಡಿ, ಮಂಜುನಾಥ ಕಶೆಟ್ಟಿ, ಸಂತೋಷ ತೇಲಿ, ಆರಿ್ಟ. ನಾಗರಾಜ, ಹಣಮವ್ವ ಮಾದರ, ಹಣಮಂತ ಮಡಿವಾಳ, ರಾಮಪ್ಪ ನಾಯಕ, ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಶಿವಪುತ್ರ ಅಮರಶೆಟ್ಟಿ, ಕಲ್ಲಪ್ಪ ಚಿಕ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 