ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಆರಂಭ

ಸೈದಾಪುರ-ಸಮೀರವಾಡಿ20: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ-ಸಮೀರವಾಡಿ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ದಿ. 19 ಶುಕ್ರವಾರದಿಂದ ಆರಂಭವಾಗಿದೆ. 

ರವಿವಾರ ದಿ. 21ರಂದು ಮುಂಜಾನೆ 9ಗಂಟೆಯಿಂದ  ಶ್ರೀಕ್ಷೇತ್ರ ಶ್ರೀಶೈಲ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದ  ಮಲ್ಲಿಕಾರ್ಜುನ್ ಕಂಬಿ ದೇವರ ಭಕ್ತಿ ಪೂರ್ವಕವಾಗಿ ಬರ ಮಾಡಿಕೊಳ್ಳುವುದು. 

 ಗುರುವಾರ ದಿ. 25ರಂದು ಮಾರುತಿ ದೇವರಕೊಂಡ ಪೂಜೆ ಮತ್ತು ಮಲ್ಲಿಕಾರ್ಜುನ ಕಂಬಿ ಐದೇಶಿ. ಶನಿವಾರ ದಿ.27ರಂದು  ಮಾರುತಿ ದೇವರ ಕಡಿ ಓಕಳಿ. ಬುಧವಾರ  ಮೇ. 1ರಂದು ಸಂಜೆ  6:30 ಗಂಟೆಗೆ ಶಿವಲಿಂಗೇಶ್ವರ ಪಲ್ಲಕ್ಕಿ ನಂದಿಕೋಲ ಸಕಲ  ವಾದ್ಯಗಳೊಂದಿಗೆ   ಸೈದಾಪುರ ಊರಿನಿಂದ ಮಡ್ಡಿ ಶಿವಲಿಂಗೇಶ್ವರ ದೇವಸ್ಥಾನಕ್ಕ  ಆಗಮನ ಹಾಗೂ ದೀಡ ನಮಸ್ಕಾರ ಕಾರ್ಯಕ್ರಮ ರಾತ್ರಿ 10ಗಂಟೆಯಿಂದ ವಿವಿಧ ಮೇಳಗಳ ಡೊಳ್ಳಿನ ಪದಗಳ ಕಾರ್ಯಕ್ರಮ ಜರಗುವುದು.  

ಮೇ. 2ರಂದು ಬೆಳಗ್ಗೆ 6 ಗಂಟೆಗೆ ಶಿವಲಿಂಗೇಶ್ವರ  ಕರ್ತೃ ಗದ್ದುಗೆಗೆ ಮಹಾಭಿಷೇಕ ನಂತರ 11ಗಂಟೆಯಿಂದ ಮಹಾಪ್ರಸಾದ ಪ್ರಾರಂಭ. ಸಾಯಂಕಾಲ 5ಗಂಟೆಗೆ ಶಿವಲಿಂಗೇಶ್ವರ ರಥೋತ್ಸವ ಜರುಗುವುದು ಮತ್ತು ಅದೇ ದಿನ ರಾತ್ರಿ 10 ಗಂಟೆಗೆ ಶಿವಶರಣರ ಡೋಹರ ಕಕ್ಕಯ್ಯ ನಾಟ್ಯಸಂಘ ಸೈದಾಪುರ್ ಇವರಿಂದ 20ನೇ ಕಲಾ ಕುಸುಮ ಕಲಿಯುಗದಲ್ಲಿ ಘರ್ಜಿಸಿದ ಕರ್ಣಅರ್ಜುನ  ಅರ್ಥತ ಒಡಹುಟ್ಟಿದವರು ಎಂಬ ಸುಂದರ ಸಮಾಜಿಕ ನಾಟ್ಯ ಜರುಗುವುದು. 

 ಮೇ. 03ರಂದು ಬೆಳಗ್ಗೆ 11ಗಂಟೆಯಿಂದ ಮಹಾಪ್ರಾಸದ ಪ್ರಾರಂಭ. ಸಾಯಂಕಾಲ 5ಕ್ಕೆ ಶಿವಲಿಂಗೇಶ್ವರ ಮರು ರಥೋತ್ಸವ ಕಾರ್ಯಕ್ರಮ ಜರಗುವುದು ಮತ್ತು ಅದೇ ದಿನ ರಾತ್ರಿ 10ಗಂಟೆಗೆ ಶಿವಲಿಂಗೇಶ್ವರ ನಾಟ್ಯ ಸಂಘ ಸೈದಾಪುರ್ ಇವರ ಅರ​‍್ಿಸುವ 20ನೇ ಕಲಾ ಕುಸುಮ “ಧರ್ಮದ ನುಡಿ ಬೆಂಕಿನಕಿಡಿ ಅರ್ಥತ ಅನಾಥ ಕಟ್ಟಿದ ಅರಿಶಿಣ ತಾಳೆ ಸಕಲ ಸದ್ಭಕ್ತರು ಭಾಗವಹಿಸಿ ಶಿವಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಿರೆಂದು ಜಾತ್ರಾ ಕಮಿಟಿಯವರು ಹಾಗೂ ಅರ್ಚಕ ಮಾಂತಯ್ಯ ಮಠಪತಿ ಶಿವಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಸದ್ಭಕ್ತಾದಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.