ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸತ್ಕರಿಸುವುದು ಸಮಾಜದ ಕರ್ತವ್ಯವಾಗಿದೆ: ಶಾಸಕ ಲಕ್ಷ್ಮಣ ಸವದಿ
It is the duty of society to recognize and treat talented students: MLA Lakshman Savadi
ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಅಥಣಿ ೨೬: ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಕಳೆದ ೯ ವರ್ಷಗಳಿಂದ ಸತತ ಪುರಸ್ಕಾರ ನೀಡುವ ಮತ್ತು ಸನ್ಮಾನಿಸುವ ಸಂಪ್ರದಾಯ ಮುಂದುವರಿಸಿಕೊAಡು ಬಂದ ಆದಿ ಬಣಜಿಗ ಯುವ ವೇದಿಕೆ ಪದಾಧಿಕಾರಿಗಳ ಕಾರ್ಯವನ್ನು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅಭಿನಂದಿಸಿದರು.
ಸಮಾಜಕ್ಕೆ ವಿದ್ಯಾವಂತ ವಿದ್ಯಾರ್ಥಿಗಳು ಮತ್ತು ಯುವಕರೇ ನಿಜವಾದ ಆಸ್ತಿಗಳು ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸತ್ಕರಿಸುವುದು ಸಮಾಜದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ವೇದಿಕೆಯ ಅಧ್ಯಕ್ಷ ರಾಜು ಅಲಬಾಳ್ ಮತ್ತು ಪದಾಧಿಕಾರಿಗಳು ನಡೆಸುತ್ತಿರುವ ಕಾರ್ಯ ಎಲ್ಲರಿಗೂ ಮಾದರಿ ಎಂದರು. ಶಿಕ್ಷಣ ಹುಲಿ ಹುಲಿ ಹಾಲಿನಂತೆ ಇದನ್ನು ಕುಡಿದವನು ಘರ್ಜಿಸದೆ ಇರಲಾರ ಎಂದು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಕೆಲ ಕೆಟ್ಟ ಸಂದರ್ಭಗಳಲ್ಲಿ ಮನುಷ್ಯ ಎಲ್ಲವನ್ನು ಕಳೆದುಕೊಳ್ಳಬಹುದು ಆದರೆ ತಾನು ಕಲಿತ ವಿದ್ಯೆಯನ್ನು ಮಾತ್ರ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಇಂದು ಸಮಾಜದ ಗೌರವ ಸ್ವೀಕರಿಸಿದ ವಿದ್ಯಾರ್ಥಿಗಳು ಮುಂದೆ ಸಮಾಜದ ಗೌರವವನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವೆ ನಿಪ್ಪಾಣಿ ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿಕೊಳ್ಳಬೇಕು ಇಲ್ಲದಿದ್ದರೆ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಸಾಧ್ಯತೆಗಳಿವೆ ಎಂದ ಅವರು ಇಂದಿನ ಡಿಜಿಟಲ್ ಕಂಪ್ಯೂಟರ್ ಎಐ ಯುಗದಲ್ಲಿ ಬದಲಾವಣೆಗೆ ತಕ್ಕಂತೆ ನಮ್ಮನ್ನು ನಾವು ಸಹ ಬದಲಾಯಿಸಿಕೊಳ್ಳಬೇಕಿದೆ ಎಂದರು.
ಆದಿ ಬಣಜಿಗ ಯುವ ವೇದಿಕೆ ಅಧ್ಯಕ್ಷ ರಾಜು ಆಳಬಾಳ ಮಾತನಾಡಿ, ಸತತ ಒಂಬತ್ತು ವರ್ಷಗಳಿಂದ ನಾವು ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ನಮ್ಮ ಈ ಕಾರ್ಯಕ್ರಮದ ಯಶಸ್ಸಿಗೆ ಬೆನ್ನೆಲುಬಾಗಿ ನಿಂತವರು ಅಥಣಿ ಶಾಸಕ ಲಕ್ಷ್ಮಣ ಸೌದಿ ಮಾಜಿ ಸಚಿವ ಶ್ರೀಮತಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಆದಿ ಬಣಜಿಗ ಎಲ್ಲ ಸಮಾಜ ಬಾಂಧವರು ಎಂದ ಅವರು ಕಳೆದ ವರ್ಷ ಶಾಸಕ ಲಕ್ಷ್ಮಣ್ ಸವದಿ ಅವರು ಸಮುದಾಯ ಭವನದ ಕಟ್ಟಡದ ನಿವೇಶನ ಖರೀದಿಸಲು ೨೫ ಲಕ್ಷ ರೂಪಾಯಿಗಳನ್ನು ಈಗಾಗಲೇ ಕೊಡ ಮಾಡಿದ್ದು, ಈ ನಿವೇಶನದಲ್ಲಿ ಕಟ್ಟಡ ಕಟ್ಟಲು ಕೂಡ ಕೈಜೋಡಿಸಬೇಕೆಂದು ಶಾಸಕರಾದ ಲಕ್ಷ್ಮಣಸೌದಿ ಶ್ರೀಮತಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇವರಲ್ಲಿ ಮನವಿ ಮಾಡಿದರು.ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮಹಾರಾಷ್ಟ್ರದ ಅಮರಾವತಿಯ ಉಪಜಿಲ್ಲಾಧಿಕಾರಿ ಸುನಿಲ್ ಟಾಕಳಿ ಸಭೆಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ, ಆದಿ ಬಣಜಿಗ ಸಮಾಜದ ಮುಖಂಡ ಚಂದ್ರಶೇಖರ್ ಬಳ್ಳೊಳ್ಳಿ ಆಗಮಿಸಿದ್ದರು. ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳ ಸಿದ್ಧ ಸ್ವಾಮೀಜಿ ವಹಿಸಿ ಮಾತನಾಡಿದರು. ೨೫೦ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸತ್ಕರಿಸಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಉಪಾಧ್ಯಕ್ಷ ಸಿದ್ದು. ಗದ್ಯಾಳ , ಕಾರ್ಯದರ್ಶಿ ಸುರೇಶ ಬಳ್ಳೋಳ್ಳಿ, ಸಹಕಾರ್ಯದರ್ಶಿ ಸ್ವಾಗತ ತೋರಿ ,ಖಜಾಂಚಿ ಚನ್ನಬಸಪ್ಪ ತೋರಿ, ಸದಸ್ಯರಾದ ಸತೀಶ ಪಾಟೀಲ, ರಮೇಶ ಮುಚ್ಚಂಡಿ, ಅಶೋಕ ಮಾರಾಪೂರ, ಬಸವರಾಜ ಮಾದಗುಡಿ, ಸುರೇಶ ಆಲಬಾಳ, ಚನ್ನಬಸು ಬಳ್ಳೋಳ್ಳಿ , ರಾಜು ಮರಡಿ, ಕುಮಾರ ಬಿಳ್ಳೂರ, ಪರಸು ಬಿರಾದಾರ, ಹಣಮಂತ ವನಜೋಳಿ,ಚಂದ್ರಶೇಖರ ಬಳ್ಳೋಳ್ಳಿ , ಧುರೀಣರಾದ ಕುಮಾರ ಗೋಟ್ಟಿ,ಅಪ್ಪು ತೆಲಸಂಗ ಸೇರಿದಂತೆ ನೂರಾರು ನೂರಾರು ಸಂಖ್ಯೆಯಲ್ಲಿ ಆದಿ ಬಣಜಿಗ ಸಮಾಜದ ಬಂದು ಬಾಂಧವರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 