ಆಲಿಮಟ್ಟಿ ಆಣೆಕಟ್ಟು ಎತ್ತರಕ್ಕೆ ಮಹಾರಾಷ್ಟ್ರ ತಕಾರಾರು ಮಾಡುವುದು ಸರಿಯಲ್ಲ: ರಾಹುಲ್ ಕುಬಕಡ್ಡಿ
It is not right for Maharashtra to argue about the height of Alimatty Dam: Rahul Kubakaddi
ವಿಜಯಪುರ 10 : 1964ರಲ್ಲಿ ಪ್ರಾರಂಭವಾಗಿರುವ ಆಲಿಮಟ್ಟಿ ಜಲಾಶಯದ ಆಣೆಕಟ್ಟಿನ ಕಾಮಗಾರಿಗಾಗಿ ಈ ಭಾಗದ ಅವಳಿ ಜಿಲ್ಲೆಯ ಸಾವಿರಾರು ರೈತರ ಲಕ್ಷಾಂತರ ಎಕರೆ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಇಲ್ಲಿರುವ ಮನೆ, ಮಠಗಳನ್ನು ಕಳೆದುಕೊಂಡು ನಮ್ಮ ಅಸ್ತಿತ್ವವನ್ನು ಮುಡಿಪಾಗಿಟ್ಟು ಅನೇಕ ಕುಟುಂಬಗಳು ಬೀದಿಗೆ ಬಂದಿರುವುದಲ್ಲದೇ ಸಂಪೂರ್ಣ ನೀರಾವರಿ ಆದರೆ ಮುಂದಿನ ಪೀಳಿಗೆಗಾದರೂ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವುದಾಗಿ ಮಹಾದಾಸೆ ಇಟ್ಟುಕೊಂಡಿದರು.
ಆಲಿಮಟ್ಟಿ ಜಲಾಶಯ ಎತ್ತರಗೊಳಿಸುವದನ್ನು ಮಹಾರಾಷ್ಟ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿ ನಿನ್ನೆ ನಡೆದ ಮಹಾರಾಷ್ಟ್ರದ ಸದನದಲ್ಲಿ ಸುಪ್ರೀಂ ಕೋರ್ಟಗೆ ದೂರು ಸಲ್ಲಿಸಲು ನಿರ್ಣಯಿಸಲಾಗಿದ್ದು, ಕೇಂದ್ರದ ಮೇಲೆ ಒತ್ತಡ ತರಲು ತಯಾರಿ ಮಾಡುತ್ತಿರುವುದು ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ಸಾಂಗ್ಲಿ ಜಿಲ್ಲೆಗಳು ನೀರಿನಲ್ಲಿ ಮುಳಗುತ್ತೆ ಎಂದು ತಂಟೆ ತಕರಾರು ಮಾಡುತ್ತಿರುವುದು ಖಂಡನೀಯ, ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿ ಪತ್ರಿಕೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ವಿಷಯವಾಗಿ ನ್ಯಾಯಮೂರ್ತಿ ಬ್ರಿಜೇಷಕುಮಾರ ವರದಿ ಸೇರಿದಂತೆ ಎಲ್ಲಾ ಸಮೀಕ್ಷೆ ಹಾಗೂ ವರದಿಗಳು ಇದರಿಂಧ ಮಹಾರಾಷ್ಟ್ರದ ಯಾವುದೇ ಪ್ರದೇಶಕ್ಕೂ ನಷ್ಟ ಆಗುವುದಿಲ್ಲ ಎಂದು ಪ್ರತಿಷ್ಠಿತ ಕಂಪನಿಯಿಂದ ಹೈಡ್ರಾಲಾಜೀಕಲ್ ಸರ್ವೇ ಮಾಡಿ ವರದಿ ಕೂಡಾ ನೀಡಿದ್ದಾರೆ.
ಮಹಾರಾಷ್ಟ್ರದ ಪ್ರವಾಹದ ಸಂದರ್ಭದಲ್ಲಿ ಕೋಯಿನಾದಿಂದ ನಮ್ಮ ರಾಜ್ಯದ ನೂರಾರು ಹಳ್ಳಿಗಳು ಜಾಲಾವೃತ್ತಗೊಂಡು ಅನೇಕ ಜೀವಹಾನಿ ಆಗಿ ಸಾಕಷ್ಟು ನಷ್ಟಕೂಡಾ ಅನುಭವಿಸುದ್ದೆವೆ, ಪ್ರಕೃತಿ ವಿಕೋಪ ಹಾಗೂ ನೆರೆಯ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಂಲಗಾಣ ಎಲ್ಲ ಸಹೋದರರಂತೆ ಅನ್ಯೂನ್ಯವಾಗಿ ಸಹಕಾರದಿಂದ ಬದುಕಿ ಬಾಳಬೇಕು ಎನ್ನುವ ಉನ್ನತ್ತವಾದ ವಿಚಾರದಿಂದ ನಾವೂ ಎಂದೂ ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಮಹಾರಾಷ್ಟ ಪದೇ ಪದೇ ಗಡಿ ವಿಚಾರವಾಗಿ, ಬಾಷೆ ವಿಚಾರವಾಗಿ, ಈಗ ನೀರಿನ ವಿಚಾರವಾಗಿ ಈ ರೀತಿ ತಕಾರಾರು ಮಾಡುವುದು ಸರಿಯಲ್ಲ ಎಂದರು.
ಒಂದು ವೇಳೆ ಇದು ಮುಂದುವರೆದರೆ ಕರ್ನಾಟದ ಎಲ್ಲಾ ಸ್ವಾಮಿಜಿಗಳು, ರೈತಪರ, ಕನ್ನಡಪರ, ಸೇರಿದಂತೆ ಸಮಸ್ತ ಪ್ರಗತಿಪರ ಸಂಘನೆಗಳ ಮಹಾ ಒಕ್ಕೂಟದಿಂದ ತಕ್ಕ ಪಾಠ ಕಲಿಸಲಾಗುವುದು ಎಂದು ರಾಹುಲ ಕುಬಕಡ್ಡಿ ಅವರು ಅತ್ಯಂತ ಗಂಭಿರವಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 