ಬೀಳಗಿ ಡಿಪೋ ಮ್ಯಾನೇಜರಗೆ ನೋಟಿಸ್ ಜಾರಿ ಪ್ರಯಾಣಿಕರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ : ಜೆ.ಟಿ ಪಾಟೀಲ
Issue notice to Bilagi depot manager and take action to resolve passenger problems: J.T. Patil
ಲೋಕದರ್ಶನ ವರದಿ
ಬಾಗಲಕೋಟೆ 22 : ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸಂಚಾರ ಮಾಡುವದರ ಜೊತೆಗೆ ಸಾರ್ವಜನಿಕರ ದೂರುಗಳಿಗೆ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಇರುವ ಮಾರ್ಗಗಳ ಪರೀಶೀಲನೆ ನಡೆಸಿ ತಕ್ಷಣ ಪರಿಹಾರ ಕಲ್ಪಿಸುವಂತೆ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು. ನವನಗರದ ಎನ್.ಡಬ್ಲೂ.ಕೆ.ಎಸ್.ಆರಿ್ಟಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಬೀಳಗ ಮತಕ್ಷೇತ್ರದ ಪ್ರಯಾಣಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಸೌಲಭ್ಯಗಳ ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಂದ ಬಂದ ದೂರುಗಳಿಗೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಇರುವ ಮಾರ್ಗಗಳ ಪರೀಶೀಲನೆ ನಡೆಸಿ, ಬಸ್ ನಿಲುಗಡೆ ಸೇರಿದಂತೆ ನಾಮಫಲಕ ಅಳವಡಿಕೆಗೆ ತಕ್ಷಣ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈಗಾಗಲೇ ಕಗಲಗೊಂಬ, ಹೂಲಗೇರಿ, ಕೆರೂರ ಮಾರ್ಗದಲ್ಲಿ ಸರತಿ, ಸೀಮಿಕೇರಿ ಬೈಪಾಸ್ ಕ್ರಾಸ್ನಲ್ಲಿ ನಿಲುಗಡೆ, ಹಳೆ ಅನಗವಾಡಿ ಕ್ರಾಸ್, ದೇವನಾಳ ಪುನರ್ವಸತಿ ಕೇಂದ್ರ, ಗುಳಬಾಳ ಪು.ಕೇ ಶಾಲೆಗೆ ಬಸ್ ನಿಲುಗಡೆ, ಅಮಲಝರಿ ಗ್ರಾಮದಲ್ಲಿರುವ ಇಂದಿರಾ ಪ್ಲಾಟಗೆ ಬೋರ್ಡ ಹಾಗೂ ಬಾಗಲಕೋಟೆ-ಅರಕೇರಿ ತಾಂಡಾ ವಸ್ತಿ ಸಾರಿಗೆ ಪುನಃ ಪ್ರಾರಂಭಿಸುವ ಕುರಿತು ತಿಳಿಸಲಾಗಿತ್ತು. ಆದರೆ ಸರಿಯಾದ ಕ್ರಮ ಆಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಸಾರ್ವಜನಿಕರ ಸೂಕ್ತ ಪ್ರಯಾಣಕ್ಕೆ ಕ್ರಮಕೈಗೊಳ್ಳಲು ತಿಳಿಸಿದರು.
ಬೇರೆ ರಾಜ್ಯಗಳಿಗೆ ತೆರಲುವ ಕೆಲವೊಂದು ಬಸ್ಗಳನ್ನು ಸ್ಥಳೀಯವಾಗಿ ಸಂಚರಿಸಲು ಕ್ರಮಕೈಗೊಳ್ಳಲು ತಿಳಿಸಿದ ಶಾಸಕರು ಹೆಚ್ಚುವರಿ 10 ಬಸ್ಗಳನ್ನು ಬೀಳಗಿ ಘಟಕಕ್ಕೆ ನೀಡುವಂತೆ ತಿಳಿಸಿದರು. ಅಲ್ಲದೇ ಬೀಳಗಿಯಿಂದ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಪ್ರತ್ಯೇಕ ಬಸ್ನ್ನು ಹೊಸದಾಗಿ ಪ್ರಾರಂಭಿಸಲು ತಿಳಿಸಿದರು. ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ಡಿಪೋಗಳಲ್ಲಿನ ಪ್ರತಿ ರೂಟಗಳ ಮಾಹಿತಿಯನ್ನು ನೀಡುವಂತೆ ತಿಳಿಸಿದರು. ದೂರುಗಳಿಗೆ ತಕ್ಷಣ ಸ್ಪಂಧನೆ ನೀಡಲು ಆಡಳಿತಕ್ಕೆ ಚುರುಕು ನೀಡುವಂತೆ ತಿಳಿಸಿದರು. ಅಲ್ಲದೇ ಸಾರ್ವಜನಿಕರು ಕೊಟ್ಟ ದೂರಿನನ್ವಯ ಬಸ್ಗಳು ಸಂಚರಿಸಿದಾಗ ಸದರ ಸದುಪಯೋಗವಾದರೆ ಮಾತ್ರ ಚಾಲನೆಯಲ್ಲಿಡಲು ತಿಳಿಸಿದರು.
ಸಭೆಗೆ ಆಗಮಿಸಿದ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಸಭೆಯ ಮುಂದಿಟ್ಟರು. ಪ್ರತಿಯೊಂದ ದೂರುಗಳಿಗೆ ಸೂಕ್ತ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸಂಚರಿಸುವಂತೆ ಮಾಡಲು ತಿಳಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುವದರ ಜೊತೆಗೆ ಬೇಜವಾಬ್ದಾರಿತನ ತೋರಿದ ಬೀಳಗಿ ಘಟಕ ವ್ಯವಸ್ಥಾಪಕ ಆರಿ್ಸ.ಖೇಡರ ಅವರಿಗೆ ನೋಟಿಸ್ ಜಾರಿ ಮಾಡಿ ಶಿಸ್ತುಕ್ರಮ ಕೈಗೊಳ್ಳುವಂತೆ ವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ಟಿ.ಪಾಟೀಲ, ಜಿಲ್ಲಾ ಸಂಚಾರಿ ಅಧಿಕಾರಿ ಕೆ.ಕೆ.ಲಮಾಣಿ. ಘಟಕ ವ್ಯವಸ್ಥಾಪಕರಾದ ಕೃಷ್ಣಾ ಚವ್ಹಾಣ, ಎ.ಎ.ಕೋರಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 