ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ
Issuance of scholarship sanction letter
ಯರಗಟ್ಟಿ 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.) ಯರಗಟ್ಟಿ ವತಿಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಪಟ್ಟಣದ ಯೋಜನಾ ಕಚೇರಿ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಹಿರಿಯರಾದ ಭಾಸ್ಕರ್ ಹಿರೇಮೆತ್ರಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರಾದ ರವಿಕುಮಾರ ಯೋಜನೆಯು ನಡೆದು ಬಂದ ದಾರಿ, ಪೂಜ್ಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳು, ಕ್ಷೇತ್ರದಿಂದ ನಡೆಯುವ ಸೇವಾ ಚಟುವಟಿಕೆಗಳು ಬಗ್ಗೆ ಮಾಹಿತಿ ನೀಡಿತ್ತಾ, ಬೆಳಗಾವಿ ಜಿಲ್ಲಾಧ್ಯಂತ 891 ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಆದೇಶ ಪತ್ರವನ್ನು ನೀಡಲಾಗಿದೆ. ಒಟ್ಟು 55,14,000 ರೂಪಾಯಿ ವಿನಿಯೋಗಿಸಲಾಗುತ್ತಿದೆ ಎಂದರು.
ಹಿರಿಯರಾದ ಭಾಸ್ಕರ್ ಹಿರೇಮೆತ್ರಿ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿ ಧರ್ಮಸ್ಥಳದಿಂದ ಶಿಕ್ಷಣಕ್ಕೆ ಒತ್ತು ನೀಡಿ ನೀಡುವ ಜ್ಞಾನದೀಪ ಶಿಕ್ಷಕರು, ಬೆಂಚು ಡೆಸ್ಕ್ , ಶಾಲಾ ಕಟ್ಟಡ, ಶೌಚಾಲಯ, ಲೈಬ್ರರಿ, ಕಂಪ್ಯೂಟರ್, ನೈತಿಕ ಶಿಕ್ಷಣ ಮುಂತಾದ ಪ್ರೋತ್ಸಾಹ, ಸರಕಾರಿ ಶಾಲೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ವಿದ್ಯಾರ್ಥಿಗಳು ಶ್ರೀ ಕ್ಷೇತ್ರದಿಂದ ಪ್ರಸಾದ ರೂಪದಲ್ಲಿ ಸಿಗುವಂತ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡೆದುಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಭವಿಷ್ಯ ರೂಪಿಸಿಕೊಂಡು ಮುಂದೆ ತಾವುಗಳು ಸಮಾಜ ಸೇವೆ ಮಾಡುವ ಗುಣ ಹೊಂದಿ ಎಂದರು.
ತಾಲೂಕು ಯೋಜನಾಧಿಕಾರಿ ಶ್ರೀಕಾಂತ ಎಂ. ಮಾತನಾಡಿದ ಅವರು ಪ್ರಸ್ತುತ ವರ್ಷ ಆಯ್ಕೆಯಾದ 174 ಪೈಕಿ 101 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಯಾದ ದಶರತ, ನಾಗರಾಜ ನಾಯ್ಕ, ಗೀತಾ ಹಟ್ಟಿ, ಬಿಬಿಜಾನ ನಧಾಪ, ಮಂಜುಳಾ ನರಗಟ್ಟಿ, ಫಕ್ಕೀರಮ್ಮಾ ಬಾಣಾವರ, ಮಹಾದೇವಿ ತುಪ್ಪದ, ಸೇವಾ ಪ್ರತೀನೀಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 