ಶಾಹುನಗರದ ವಿಶಾಲ ಉದ್ಯಾನವನಕ್ಕೆ ಉದ್ಘಾಟನೆ ಭಾಗ್ಯ ಎಂದು ?

ಶಾಹುನಗರದ ವಿಶಾಲ ಉದ್ಯಾನವನಕ್ಕೆ ಉದ್ಘಾಟನೆ ಭಾಗ್ಯ ಎಂದು ? Is the inauguration of the vast park in Shahunagar auspicious?

ಮುಳ್ಳು ತುಂಬಿದ ಜಾಲಿ ಗಿಡ, ಗಂಟಿಗಳ ಕಾಡು* ಹುಳ್ಳು ಹುಪ್ಪಡಿ, ಕ್ರಿಮಿ ಕೀಟಗಳಿಗೆ ಸುರಕ್ಷಿತ ನೆಲೆ 

ಬೆಳಗಾವಿ: ಉದ್ಯಾನವನಗಳು ನಗರ ಸೌಂದರ್ಯಕರಣದ ಪ್ರತೀಕ. ಒಂದು ಉತ್ತಮ ವಾಯು ವಿಹಾರಕ್ಕೂ ಇವುಗಳ ಮಹತ್ವ  ಬಹಳ. ಉದ್ಯಾನವನಗಳಲ್ಲಿನ ಗಿಡಮರಗಳು ಸೂಸುವ ತಂಗಾಳಿ, ಹಕ್ಕಿ ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ. ವಾಯು ವಿಹಾರಕ್ಕೆಂದು ತೆರಳುವ ಜನರಿಗೆ ಉದ್ಯಾನವನಗಳು ಒಂದು ಸುಂದರ ಸಂಭ್ರಮದ ತಾಣ. ಇಂಥ ಒಂದು ಸುಂದರ ತಾಣ ತನ್ನ ಸೌಂದರ್ಯವನ್ನು ಕಳೆದುಕೊಂಡು ಮತ್ತೇ ತನ್ನ ಮೂಲ ಸ್ವರೂಪವನ್ನು ಪಡೆದುಕೊಂಡು ಮುಳ್ಳು ತುಂಬಿದ ಜಾಲಿ ಗಿಡ, ಗಂಟಿಗಳ ಕಾಡಾಗಿದೆ.  

ಹೌದು. ಇದು ಶಾಹುನಗರದ ಸುಮಾರು 3ಎಕರೆ ಪ್ರದೇಶದಲ್ಲಿ ಸುಮಾರು 80ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿತ ಉದ್ಯಾನವನದ ಕಥೆಯಾಗಿದೆ. ಉದ್ಯಾನವನಕ್ಕೆಂದು ಮೀಸಲಿದ್ದ ಸುಮಾರು 3ಎಕರೆಯಷ್ಟು ಈ ಪ್ರದೇಶ ಖುಲ್ಲಾ ಜಾಗೆಯಾಗಿದ್ದರಿಂದ ಎಲ್ಲ ಕಡೆಯಿಂದ ಕೊಳಚೆ ನೀರನ್ನು ಇಲ್ಲಿಯೇ ಹರಿಬಿಟ್ಟು ಸದಾ ಹರಿಯುವ ಕೊಳಚೆ ನೀರಿನಿಂದ ತುಂಬಿ ಹೋಗಿತ್ತು. ಸೂರ‌್ಯನ ಕಿರಣಗಳು ಕೂಡ ನೆಲ ತಾಗದಂತೆ ದೊಡ್ಡ ದೊಡ್ಡ ಜಾಲಿ ಮರಗಳು ವಿಶಾಲವಾಗಿ ಬೆಳೆದು ನಿಂತು ಮುಳ್ಳು ಗಿಡಗಳ ಕಾಡಿನಂತಾಗಿತ್ತು. ಹುಳ್ಳು ಹುಪ್ಪಡಿ, ಕ್ರಿಮಿ ಕೀಟಗಳಿಗೆ ಸುರಕ್ಷಿತ ನೆಲೆಯಾಗಿತ್ತು. ಹಂದಿಗಳ ವಾಸಸ್ಥಾನ, ದನಕರುಗಳ ಬೀಡಾಗಿತ್ತು. ಕಪ್ಪು ಮಣ್ಣಿನ ಜಮೀನು ಆಗಿದ್ದರಿಂದ ಕೊಳಚೆ ನೀರು ನಿಂತು ಈ ಜಾಗೆಯನ್ನು ಸ್ವಚ್ಛಗೊಳಿಸುವುದು ಅಸಾಧ್ಯವೇ ಎನ್ನುವ ಮಟ್ಟಿಗೆ ಈ ನೆಲದ ಸ್ಥಿತಿಯಾಗಿತ್ತು. 

ಆದರೂ ಈ ಜಮೀನಿಗೂ ಬಂತು ನೀಡಿ ಭಾಗ್ಯ. 2023ರಲ್ಲಿ ಈ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಆಗಿನ ಶಾಸಕ ಅನಿಲ ಬೆನಕೆಯವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಆನ ಕಾಲಿಡದಂಥ ಈ ಪ್ರದೇಶ ಸುಂದರ ಉದ್ಯಾನವನವಾಗಿ ರೂಪಗೊಳ್ಳಹತ್ತಿತ್ತು. ಮುಳ್ಳು ಗಿಡ, ಗಂಟಿಗಳನ್ನೆಲ್ಲ ಸ್ವಚ್ಛಗೊಳಿಸಿ ಸುತ್ತಲೂ ಆವರಣ ಗೋಡೆ ನಿರ್ಮಿಸಿ ಜನರಿಗೆ ವಾಕಿಂಗ್ ಮಾಡಲು ಪುಟ್‌ಪಾಥ್ ಕಲ್ಪಿಸಿ, ವ್ಯಾಯಾಮ ಸಲಕರಣೆಗಳನ್ನು ಅಳವಡಿಸಿ ವೃದ್ಧರಿಗೆ, ಮಕ್ಕಳಿಗೆ ದಣಿವಾರಿಸಿಕೊಳ್ಳಲು ಒಂದು ಆಸನವನ್ನು ನಿರ್ಮಿಸಲಾಯಿತು. ಸುತ್ತ ಮುತ್ತಲಿನ ಜನರು ಸಂಭ್ರಮದಿಂದ ಸಂತೋಷದಿಂದ ಬೆಳಗಾಗುತ್ತಲೇ ಮತ್ತು ಸಂಜೆ ವಾಕಿಂಗ್ ಮಾಡುವುದು ಶುರುವಾಯಿತು. ಮಕ್ಕಳು ಅಲ್ಲಿಗೆ ಆಗಮಿಸಿ ಸಂಭ್ರಮದಿಂದ ಓಡಾಡುವುದು ಗೋಚರಿಸುತ್ತಿತ್ತು. ಇಷ್ಟೆಲ್ಲ ಆಯಿತು. ನಿಜ. ಆದರೆ ಈ ಉದ್ಯಾನವನ ಮಾತ್ರ ಉದ್ಘಾಟನೆ ಭಾಗ್ಯ ಕಾಣದೆ ಮತ್ತೇ ಮೊದಲಿನಂತಾಗಿದೆ. ಅದಕ್ಕೆ ಹೇಳಿದ್ದು ಮೂಲ ಸ್ವರೂಪ ಪಡೆದುಕೊಂಡಿದೆ ಎಂದು. 

2023ರಲ್ಲಿ ಅನಿಲ ಬೆನಕೆಯವರು ಚಾಲನೆ ನೀಡಿ ಸುಂದರ ಉದ್ಯಾನವನ ನಿರ್ಮಾಣವಾಯಿತು. ಆದರೆ ಅಷ್ಟರಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರಕಾರ ಅಧಿಕಾರದ ಗದ್ದುಗೆ ಏರಿತು. ಇದು ಈ ಉದ್ಯಾನವನ ಉದ್ಘಾಟನೆಯ ಮೇಲೆ ಕರಿಛಾಯೆ ಅವರಿಸುವಂತಾಯಿತು. ಈಗ ಮತ್ತೇ ಮೊದಲಿನ ಹಾಗೆ ಜಾಲಿ ಮರಗಳು ತಲೆ ಎತ್ತಿ ನಿಂತಿವೆ. ನೀರು ನಿಂತು ಮತ್ತೇ ಕೊಳಚೆಯ ಸಾಮ್ರಾಜ್ಯ ನಿರ್ಮಾಣವಾಗುತ್ತಿದೆ. ಹಕ್ಕಿ ಪಕ್ಷಿಗಳ ಕಲರವದ ಬದಲು ಕಪ್ಪೆಗಳು ವಟಗುಡುತ್ತಿವೆ. ಹುಳು ಹುಪ್ಪಡಿಗಳು, ಕ್ರಿಮಿ ಕೀಟಗಳು ನಲಿದಾಡುತ್ತಿವೆ. ಹಂದಿ, ದನಕರುಗಳಿಗೆ ಆಶ್ರಯ ತಾಣವಾಗುತ್ತಿದೆ. ಸುಮಗಳು ಅರಳಿ ಘಮ್ಮೆಂದು ಸುವಾಸನೆ ಹರಡಿ ದುಂಬಿಗಳ ಝೇಂಕಾರ ನಾ ದಕೇಳಿ ಬರಬೇಕಾಗಿದ್ದ ಉದ್ಯಾನವಾನ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಸ್ವರ್ಗತಾಣವಾಗಿದ್ದು, ಸುಂದರವಾದ ಗಿಡಮರಗಳಿಂದ ಕಂಗೊಳಿಸಬೇಕಾಗಿದ್ದ ವಿಶಾಲವಾದ ಉದ್ಯಾನವನ ತನ್ನ ಸೌಂದರ್ಯವನ್ನು ಕಳೆದುಕೊಂಡು ಮತ್ತೇ ಕಾಡಾಗಿ ರೂಪುಗೊಳ್ಳುತ್ತಿರುವುದು ವಿಪರ್ಯಾಸ. ಸುಮಾರು 80ಲಕ್ಷ ರೂ. ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.  

 ಆಗಾಗ ಅಲ್ಪಸ್ವಲ್ಪ ಸ್ವಚ್ಛತೆ ಕೈಗೊಂಡರು ಅದೇನು ಪ್ರಯೋಜನಕ್ಕೆ ಬರುತ್ತಿಲ್ಲ. ಆದ್ದರಿಂದ ಇಷ್ಟೊಂದು ವಿಶಾಲವಾದ ಉದ್ಯಾನವನವನ್ನು ಹಾಳಾಗಲು ಬಿಡದೆ ಹಣವನ್ನು ವ್ಯರ್ಥಗೊಳಿಸದೆ ಅದಕ್ಕೆ ಉದ್ಘಾಟನೆ ಭಾಗ್ಯ ನೀಡಿ ಸುಂದರ ಉದ್ಯಾನವನವನ್ನಾಗಿ ಮಾಡಿ ನಗರಕ್ಕೊಂದು ಶೋಭೆ ಕಾಣುವಂತೆ ಮಾಡಬೇಕು. ವಾತಾವರಣ ಶುದ್ಧಗೊಳಿಸುವ ಹೆಚ್ಚು ಪ್ರಾಣವಾಯು ನೀಡುವ ಅರಳಿ ಮರದಂಥ ಮರಗಳನ್ನು, ಓಷಧಿ ಸಸ್ಯಗಳನ್ನು ನೆಟ್ಟು, ಉದ್ಯಾನವನಕ್ಕೆ ಬರುವ ಜನರ ಮನಸನ್ನು ಉಲ್ಲಸಿತಗೊಳಿಸುವ ಪುಷ್ಪ ಗಿಡಗಳನ್ನು ಹಚ್ಚಿ ಉದ್ಯಾನವನದ ಸೌಂದರ್ಯವನ್ನು ಹೆಚ್ಚಿಸಬೇಕೆಂಬುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ. 

ಉದ್ಯಾನವನ ನಿರ್ಮಾಣ ಕ್ಯಗೆತ್ತಿಕೊಂಡಾಗ ನಮಗೆಲ್ಲ ಅತೀವ ಸಂತೋಷವಾಯಿತು. ವಯಸ್ಸಾದವರಿಗೆ ಮಕ್ಕಳಿಗೆ ಹತ್ತಿರ ಅನುಕೂಲವಾಗುತ್ತಿತತು. ಮಕ್ಕಳಿಗಾಗಿ ವ್ಯಾಯಾಮ ಸಲಕರಣೆಗಳನ್ನು ಕೂಡಿಸಿದ್ದಾರೆ ಹೌದು. ಆದರೆ ಉದ್ಘಾಟನೆ ಮಾಡದೆ ಮಕ್ಕಳಿ ಆಡಲು ಅನುಮತಿಯಿಲ್ಲ. ಸ್ವಚ್ಛತೆಯಿಲ್ಲ. ಮತ್ತೆ ಕಾಡಿನಂತಾಗಿ ಹೋಗಲು ಭಯವಾಗುತ್ತಿದೆ. ಮೆಂಟೆನನ್ಸ ಇಲ್ಲ. ದನಕರುಗಳನನು ಮೇಯಲು ಬಿಡಲಾಗುತ್ತಿದೆ. ಅಲ್ಲದೆ ಯೋಗ, ವ್ಯಾಯಾಮ ಮಾಡಲು ಗ್ಲಾಸಹೌಸ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಈಗ ಅದು ಕೂಡ ನೆನೆಗುದಿಗೆ ಬಿದ್ದಿದೆ. ಒಟ್ಟಾರೆ ಉದ್ಯಾನವನ ಇದ್ದೂ ಇಲ್ಲದಂತಾಗಿದೆ.