ಸೊಲೈಮಾನಿ ಹತ್ಯೆಯ ನಂತರ ಮಾತುಕತೆಗೆ ಹೆಚ್ಚು ಆಸಕ್ತಿ ತೋರಿರುವ ಇರಾನ್ : ರಾಬರ್ಟ್ ಒ'ಬ್ರಿಯೆನ್
ವಾಷಿಂಗ್ಟನ್, ಜ 12: ಇರಾನ್ ಕಮಾಂಡರ್ ಕಾಸೆಮ್ ಸೊಲೈಮಾನಿಯ ಹತ್ಯೆಯ ನಂತರ ಟೆಹ್ರಾನ್ ಮಾತುಕತೆಗೆ ಹೆಚ್ಚು ಆಸಕ್ತಿ ತೋರಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರಿಯೆನ್ ಅಭಿಪ್ರಾಯಪಟ್ಟಿದ್ದಾರೆ.
ಇರಾನಿಯನ್ನರೊಂದಿಗೆ ಕುಳಿತು ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುವ ಸಾಧ್ಯತೆಗಳು ಗಮನಾರ್ಹವಾಗಿ ಸುಧಾರಿಸಿದೆ. ಏಕೆಂದರೆ ಸೊಲೈಮಾನಿ ಯುದ್ಧಭೂಮಿಯಿಂದ ಹೊರಗುಳಿದಿದ್ದಾನೆ ಎಂದು ಓ'ಬ್ರಿಯೆನ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಜನವರಿ 3 ರ ರಾತ್ರಿ, ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ಕಾರ್ಯಾಚರಣೆ ನಡೆಸಿ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ (ಐಆರ್ಜಿಸಿ) ನ ಕಮಾಂಡರ್ ಸೊಲೈಮಾನಿ ಮತ್ತು ಇರಾಕ್ ಶಿಯಾ ನಾಯಕ ಅಬು ಮಹ್ದಿ ಮುಹಂದಿಸ್ ಸೇರಿದಂತೆ ಇತರರನ್ನು ಕೊಂದಿತು. ಡಿಸೆಂಬರ್ 31 ರಂದು ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ಈ ಇಬ್ಬರೂ ಕಮಾಂಡರ್ಗಳು ಸಂಚು ನಡೆಸಿದ್ದರು ಎಂದು ಟ್ರಂಪ್ ಆರೋಪಿಸಿದ್ದಾರೆ.
ಅಮೆರಿಕದ ಪಡೆಗಳಿಗೆ ಆತಿಥ್ಯ ನೀಡಿರುವ ಇರಾಕಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇರಾನ್ ಬುಧವಾರ ಪ್ರತೀಕಾರ ತೀರಿಸಿಕೊಂಡಿತು. ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವಾಷಿಂಗ್ಟನ್ ತಿಳಿಸಿದೆ. ಇರಾನ್ ನ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಅಮೆರಿಕದ ಆಡಳಿತ ದಾಳಿಯಲ್ಲಿ ಭಾಗಿಯಾಗಿರುವ ಎಂಟು ಹಿರಿಯ ಇರಾನಿನ ಅಧಿಕಾರಿಗಳನ್ನು ಮತ್ತು 17 ಇರಾನಿನ ಕಬ್ಬಿಣ ಮತ್ತು ಉಕ್ಕಿನ ಕಂಪನಿಗಳ ಮೇಲೆ ಶುಕ್ರವಾರ ಹೊಸ ನಿರ್ಬಂಧಗಳನ್ನು ಘೋಷಿಸಿತು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 