ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ International Yoga Day tomorrow

ಲೋಕದರ್ಶನ ವರದಿ 

ಬೆಳಗಾವಿ 19:  ಇಲ್ಲಿನ ಶಿವಬಸವ ನಗರದ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೈದಾನದ ಆವರಣದಲ್ಲಿ ಜೂನ್ 21 ರಂದು ಬೆಳಗಿನ 6:30 ಗಂಟೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಹಿಮಾಲಯನ್ ಧ್ಯಾನ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ನಾಗನೂರು  ರುದ್ರಾಕ್ಷಿ ಮಠದ ವತಿಯಿಂದ  ಏರಿ​‍್ಡಸಲಾಗಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ  ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರು ವಹಿಸಿಕೊಳ್ಳಲಿದ್ದಾರೆ. ಹಿಮಾಲಯನ್ ಯೋಗ ಸಾಧಕರಾದ ನಿರಂಜನ ಮಹಾಸ್ವಾಮಿಗಳು ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಬಸವನ ಬಾಗೇವಾಡಿಯ ಖ್ಯಾತ ವಾಗ್ಮಿ  ಅಶೋಕ್ ಹಂಚಲಿ ಅವರು ಅತಿಥಿ ಉಪನ್ಯಾಸಕರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಲಾಭವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.