ಆಳೂರ ಗ್ರಾಮದಲ್ಲಿ ನರೇಗಾ ಕಾಮಗಾರಿ ಪರೀಶೀಲನೆ : ಮಾದೇವಪ್ಪ

ಆಳೂರ ಗ್ರಾಮದಲ್ಲಿ ನರೇಗಾ ಕಾಮಗಾರಿ ಪರೀಶೀಲನೆ : ಮಾದೇವಪ್ಪ Inspection of Narega work in Alura village: Madevappa

ಲೋಕದರ್ಶನ ವರದಿ  

ಇಂಡಿ 08 : ತಾಲ್ಲೂಕಿನ ಆಳೂರ ಗ್ರಾಮ ಪಂಚಾಯಿತಿಗೆ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಮಹದೇವಪ್ಪ ಏವೂರ ಅವರು ಆಲೂರ ಗ್ರಾಮ ಪಂಚಾಯತ ವ್ಯಾಪ್ತಿಯ ಬಸವರಾಜ ನಾಟಿಕರ ರವರ ಜಮೀನಲ್ಲಿ ಬಸಿ ಗಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರೀಶೀಲನೆ ಮಾಡಿದರು. ಕಾಮಗಾರಿ ಸ್ಥಳದಲ್ಲಿ ಗಂಡು 03 ಹೆಣ್ಣು 10 ಒಟ್ಟು 13 ಜನ ಕೂಲಿಕಾರರು ಕಾರ್ಯ ನಿರ್ವಹಿಸುತ್ತಿದ್ದರು. ಓಒಒಖ ಪೇಸ್ ಅಥೆಂಟಿಕೇಶನ್ ಪರೀಶೀಲನೆ ಮಾಡಿ, ಕೂಲಿಕಾರರ ಹಾಜರಾತಿ ದಾಖಲಾತಿಯನ್ನು ಸಮರ​‍್ಕವಾಗಿ ನಿರ್ವಹಿಸುವಂತೆ ಸೂಚಿಸಿದರು. ನಂತರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಕರ ವಸೂಲಾತಿ, ಗ್ರಾಮಸಭೆ,  ನರೇಗಾ ಎಸ್‌ಬಿಎಂ, ವಸತಿ, ಕುಡಿಯುವ ನೀರು ಸ್ವಚ್ಛ ವಾಹಿನಿ ಮಾಹಿತಿ  ಹಾಗೂ ಇತರೆ ಯೋಜನೆಗಳ ಪ್ರಗತಿ ಕುರಿತು ಪರೀಶೀಲಿಸಿ ನಿಗದಿತ ಗುರಿ ಸಾಧಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.  

ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಹಾಜರಾತಿ ವಹಿ ವೀಕ್ಷಕರ ವಹಿ ಚಲನ-ವಲನ ವಹಿ ನಗದು ವಹಿ  ಸಾಮಗ್ರಿ ವಹಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯ ಸ್ಥಿತಿಗತಿ ಕುರಿತು ಪರೀಶೀಲಿಸಿದರು. ಮಕ್ಕಳ ದಾಖಲಾತಿ ಮತ್ತು ಹಾಜರಾತಿ, ಪುಸ್ತಕಗಳ ಲಭ್ಯತೆ, ಕಂಪ್ಯೂಟರ್ ವ್ಯವಸ್ಥೆ, ಆಸನಗಳ ವ್ಯವಸ್ಥೆ ವೀಕ್ಷಿಸಿ, ಓದುಗರ ಸಂಖ್ಯೆ ಹೆಚ್ಚಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಂಥಾಲಯ ಮೇಲ್ವಿಚಾರಕರಿಗೆ ಸೂಚಿಸಿದರು.ಈ ಸಮಯದಲ್ಲಿ ತಾಲೂಕ ಐಇಸಿ ಸಂಯೋಜನಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ  ಉಮೇಶ ಹೂಗಾರ, ಡಿಇಒ ಮಲ್ಲಿಕಾರ್ಜುನ ಇಂಗಳೆ, ಬಿಎಪ್‌ಟಿ ಮದರಸಾಬ ಚೌಧರಿ, ಗ್ರಾ.ಪಂ.ಸಿಬ್ಬಂದಿಗಳು, ನರೇಗಾ ಕೂಲಿಕಾರರು ಇದ್ದರು.