ಆಂತರಿಕ ಶುದ್ಧತೆ, ಸದಾಚಾರವೇ ಶಿವಾನಂದ ಪರಮಹಂಸರ ಸಂದೇಶ

ಆಂತರಿಕ ಶುದ್ಧತೆ, ಸದಾಚಾರವೇ ಶಿವಾನಂದ ಪರಮಹಂಸರ ಸಂದೇಶ  Inner purity and righteous conduct constitute the message of Shivananda Paramahamsa.

ಆಂತರಿಕ ಶುದ್ಧತೆ, ಸದಾಚಾರವೇ ಶಿವಾನಂದ ಪರಮಹಂಸರ ಸಂದೇಶ  

ಹಾರೂಗೇರಿ 13: ಮನುಷ್ಯ ತನ್ನೊಳಗಿನ ದೈವತ್ವವನ್ನು ಅರಿತು, ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ ನಿಸ್ವಾರ್ಥ ಸೇವೆ ಮಾಡಬೇಕು. ಬಾಹ್ಯ ಆಚರಣೆಗಿಂತ ಮನಸ್ಸಿನ ಶುದ್ಧತೆ, ಸದಾಚಾರ, ಕರುಣೆ, ಪರೋಪಕಾರ ಹಾಗೂ ಆತ್ಮಚಿಂತನೆಯೇ ಶಿವಾನಂದ ಪರಮಹಂಸರ ಪ್ರಮುಖ ಸಂದೇಶವಾಗಿದೆ ಎಂದು ಲೀಲಾಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಹೇಳಿದರು.  ಇಲ್ಲಿನ ಚನ್ನವೃಷಭೇಂದ್ರ ದೇವರ ಕೊಂಡಜ್ಞರ ಲೀಲಾಮಠದಲ್ಲಿ ಭಾನುವಾರ ನಡೆದ ಶಿವಾನಂದ ಪರಮಹಂಸರ 50ನೇ ಪುಣ್ಯಾರಾಧನೆ ಮಹೋತ್ಸವ ಹಾಗೂ ಶ್ರಾವಣ ಮಾಸದ ಪ್ರವಚನ ಮುಕ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಶಿವಾನಂದ ಪರಮಹಂಸರ ಉಪದೇಶಗಳು ಮನಕುಲದ ಉದ್ಧಾರಕ್ಕೆ ದಾರೀದೀಪವಾಗಿವೆ. ಶ್ರಾವಣ ಮಾಸದ ಒಂದು ತಿಂಗಳ ಕಾಲ ಸಿದ್ಧರಾಮ ಶಿವಯೋಗಿಗಳ ಚರಿತ್ರೆ ಹಾಗೂ ಸಮಗ್ರ ಆಧ್ಯಾತ್ಮಿಕ ದರ್ಶನವನ್ನು ಅಪ್ಪಾಸಾಬ ಕುಲಕರ್ಣಿಯವರು ನೀಡಿದ್ದು, ಮಠದಲ್ಲಿ ನಿರಂತರವಾಗಿ ನಡೆಯುತ್ತಿರುವ ಆಧ್ಯಾತ್ಮಿಕ ಜ್ಞಾನ ದಾಸೋಹಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.  ಶ್ರೀಮಠದ ಸದ್ಭಕ್ತ ಧರೇಪ್ಪ ಹವಾಲ್ದಾರ ಮಾತನಾಡಿ, ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಅಪ್ಪಾಸಾಬ ಕುಲಕರ್ಣಿಯವರು ಸಿದ್ಧರಾಮ ಶಿವಯೋಗಿಗಳ ಚರಿತ್ರೆ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು. ಲಕ್ಷ್ಮಣ ಶಾಸ್ತ್ರಿ ಮಾತನಾಡಿ, ಆಧ್ಯಾತ್ಮ, ಪ್ರವಚನ ಹಾಗೂ ಸದ್ಗುರುಗಳ ದರ್ಶನ-ಆಶೀರ್ವಾದದಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಹೇಳಿದರು.  ಶಿವಾನಂದ ಪರಮಹಂಸರ 50ನೇ ಪುಣ್ಯಾರಾಧನೆ ನಿಮಿತ್ತ ಶ್ರೀಮಠದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರಾವಣ ಮಾಸದ ಒಂದು ತಿಂಗಳ ಕಾಲ ಸಿದ್ಧರಾಮ ಶಿವಯೋಗಿಗಳ ಚರಿತ್ರಾಮೃತ ಬೋಧಿಸಿದ ಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಅವರನ್ನು ಸದ್ಭಕ್ತರು ಸತ್ಕರಿಸಿ ಅಭಿನಂದಿಸಿದರು.  ಕಾರ್ಯಕ್ರಮದಲ್ಲಿ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ಎಸ್‌.ಎ. ದಟವಾಡ, ಶ್ರೀಶೈಲಗೌಡ ಉಮರಾಣಿ, ನೇಮಣ್ಣ ಕೊತ್ತಲಗಿ, ಸಿದ್ದಪ್ಪ ಗವಣವರ, ಜ್ಯೋತಪ್ಪ ಉಮರಾಣಿ ಸೇರಿದಂತೆ ಹಲವಾರು ಸದ್ಭಕ್ತರು ಉಪಸ್ಥಿತರಿದ್ದರು.