ನಿಷೇಧಾಜ್ಞೆ: ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಭೆ ರದ್ದು
Injunction: Kannada Sahitya Parishad annual meeting cancelled
ಜಮಖಂಡಿ 04: ತಾಲೂಕಿನ ಕಲಹಳ್ಳಿ ಗ್ರಾಮದ ಸತ್ಯಕಾಮರ ಸುಮ್ಮನೆ ಪ್ರತಿಷ್ಠಾನದಲ್ಲಿ ಅ, 5ರಂದು ನಡೆಯಬೇಕಿದ್ದ 108ನೇ, 2025-26 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರ ವಾರ್ಷಿಕ ಸಭೆ ರದ್ದುಗೊಂಡಿದ್ದು. ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ತಹಸೀಲ್ದಾರ ಅನೀಲ ಬಡಿಗೇರ ಆದೇಶ ಹೊರಡಿಸಿದ್ದ ಹಿನ್ನಲೆ ಸಭೆ ರದ್ದುಗೊಂಡಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಲಹಳ್ಳಿ ಗ್ರಾಮದಲ್ಲಿ ಸೆ.18 ರಂದು ಪ್ರೇಮ ಪ್ರಕರಣಕ್ಕೆ ಎರಡು ಕೋಮುಗಳ ಮಧ್ಯೆ ಗುಂಪು ಘರ್ಷಣೆ ನಡೆದಿತ್ತು. ಈ ಗಲಾಟೆಯಲ್ಲಿ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿತ್ತು. ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆ ನಡೆಯುವ ಕಾರಣ ಸಾವಿರಾರು ಜನರು ಬರುವ ನೀರೀಕ್ಷೆಯಿಂದ ಪೋಲಿಸ್ ಭದ್ರತೆಯನ್ನು ಕೇಳಲಾಗಿತ್ತು. ಕಲ್ಲಹಳ್ಳಿಯಲ್ಲಿ ವೆಂಕಟೇಶ್ವರ ದೇವರ ಜಾತ್ರಾಮಹೋತ್ಸವ ಹಾಗೂ ಹಿರೇಪಡಸಲಗಿ ಗ್ರಾಮದಲ್ಲಿ ಆರ್.ಎಸ್.ಎಸ್. ಪಥ ಸಂಚಲನ, ತೊದಲಬಾಗಿ ಗ್ರಾಮದಲ್ಲಿ ಆರ್.ಎಸ್.ಎಸ್. ಮಂಡಳಿ ಉತ್ಸವ, ಚಿಕ್ಕಲಕಿ ಗ್ರಾಮದಲ್ಲಿ ಆರ್.ಎಸ್.ಎಸ್. ಪಥ ಸಂಚಲನ, ಟಕ್ಕೋಡ ಗ್ರಾಮದಲ್ಲಿ ಪಿಕೆಪಿಎಸ್, ಆಡಳಿತ ಮಂಡಳಿಯ ಚುಣಾವಣೆ, ಆಲಬಾಲ ಗ್ರಾಮದಲ್ಲಿ ಆರ್.ಎಸ್.ಎಸ್. ಪಥ ಸಂಚಲನ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಪೋಲಿಸ್ ಭದ್ರತೆ ಇಲ್ಲದ ಕಾರಣ ಹಾಗೂ ಕಲ್ಲಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಕಾರಣ ಗ್ರಾಮದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿರುವದರಿಂದ ಈ ವರದಿ ಆಧರಿಸಿ ತಹಸೀಲ್ದಾರ ಅನೀಲ ಬಡಿಗೇರ ಅ.4, 5 ರಂದು ಕಲಹಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಎಂದು ಮಾಹಿತಿಯನ್ನು ಲೋಕದರ್ಶನ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 