ಅತಿ ಶೀಘ್ರದಲ್ಲಿ ಸ್ವತಂತ್ರ ನ್ಯಾಯಬೆಲೆ ಅಂಗಡಿ ಆರಂಭ : ಹೊಸಕೋಟೆ ಜಗದೀಶ
Independent Fair Price Shop to Open Very Soon: Hoskote Jagadeesha
ಲೋಕದರ್ಶನ ವರದಿ
ಕಂಪ್ಲಿ 15 : ಅತಿ ಶೀಘ್ರದಲ್ಲೇ ಮೆಟ್ರಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವತಂತ್ರ ನ್ಯಾಯಬೆಲೆ ಅಂಗಡಿ ಆರಂಭವಾಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು. ತಾಲೂಕಿನ ಮೆಟ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 3ನೇ ವರ್ಷದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನ್ಯಾಯಬೆಲೆ ಅಂಗಡಿಗಾಗಿ ಸತತ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದು, ಈಗ ಪಡಿತರ ಅಂಗಡಿಗೆ ಕಾಲ ಕೂಡಿ ಬಂದಿದೆ. ಮೆಟ್ರಿ ಸಹಕಾರ ಸಂಘವು ಉಪ್ಪಾರಹಳ್ಳಿ, ಚಿನ್ನಾಪುರ ಒಳಗೊಂಡಿದೆ. ಸ್ಥಳೀಯ ಶಾಸಕ ಜೆ.ಎನ್.ಗಣೇಶ್ ಅಣ್ಣನವರು ಇಲ್ಲಿನ ಸೊಸೈಟಿಗೆ ಸರ್ಕಾರಿ ನಿವೇಶನ ಒದಗಿಸಿ, ಅನುದಾನ ನೀಡುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ನಂತರ ಪ್ರಭಾರ ಮುಖ್ಯಕಾರ್ಯನಿರ್ವಾಹಕ ಡಿಂಡಿ ಮಹರ್ಷಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 944 ಸದಸ್ಯರನ್ನು ಹೊಂದಿದೆ. ಸುಮಾರು 25 ಲಕ್ಷ 91 ಸಾವಿರ ಶೇರು ಬಂಡವಾಳ ಒಳಗೊಂಡಿದೆ. 234 ಜನಕ್ಕೆ ಸುಮಾರು 1 ಕೋಟಿ 75 ಲಕ್ಷ ಕೆಪಿಸಿಸಿ ಸಾಲ, 107 ಜನಕ್ಕೆ ಸುಮಾರು 35 ಲಕ್ಷ 12 ಸಾವಿರ ಬಿಡಿಪಿ ಸಾಲ ವಿತರಿಸಲಾಗಿದೆ. ಒಂದು ಸ್ತ್ರೀಶಕ್ತಿ ಗುಂಪಿಗೆ ಸುಮಾರು 3 ಲಕ್ಷ ಸಾಲ ವಿತರಿಸಿದೆ. ಸುಮಾರು 3 ಲಕ್ಷ 70 ಸಾವಿರ ಠೇವಣಿ ಸಂಗ್ರಹಿಸಿದೆ. 2025-26ನೇ ಸಾಲಿನಲ್ಲಿ ಸಂಘವು 39 ಸಾವಿರ ನಿವ್ವಳ ಲಾಭಗಳಿಸಿದೆ ಎಂದರು. ಈ ಸಭೆಯಲ್ಲಿ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಂಗಾಧರ, ನಿರ್ದೇಶಕರಾದ ಹೊನ್ನಳ್ಳಿ ಗಂಗಾಧರ, ಜಮಾಪುರ ವೀರಭದ್ರ್ಪ, ಅಯ್ಯಪ್ಪ ಸಿಂಧಿಗೇರಿ ಚಂದ್ರಶೇಖರ, ಶೇಕ್ಷಾವಲಿ, ಪಾಂಡುರಂಗ, ಗಿರೆಡ್ಡಿ ಮರೇಗೌಡ, ಪಕ್ಕೀರ್ಪ, ಲಕ್ಷ್ಮೀ, ಮಂಜುಳಾ, ನಾಗರಾಜಗೌಡ(ಬ್ಯಾಂಕ್ ಪ್ರತಿನಿಧಿ), ರಾಮಚಂದ್ರ್ಪ(ವೃತ್ತ ಮೇಲ್ವಿಚಾರಕ), ಮುಖಂಡರಾದ ಚಿದಾನಂದಪ್ಪ, ಲಕ್ಷ್ಮಣ, ಉಪ್ಪಾರಹಳ್ಳಿ ತಿಮ್ಮಪ್ಪ, ಚಿನ್ನಾಪುರ ನಾಗರಾಜ, ಶೇಷಪ್ಪ ಸೇರಿದಂತೆ ರೈತರು, ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 