ಚಾಪೆಲ್ ಮತ್ತು ಟಪ್ಲೋವ್ ನೋಡಲು ಹೆಚ್ಚಿದ ವೀಕ್ಷಕರ ಸಂಖ್ಯೆ : ಡಿಸೆಂಬರ್ ನಲ್ಲಿ 5 ಲಕ್ಷ ರೂ.ಆದಾಯ
Increased viewership for Chapel and Taplow: Revenue of Rs. 5 lakh in December
ಕಾರವಾರ 05: ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಸ್ಥಾಪಿಸಿರುವ ಚಾಪೆಲ್ ಯುದ್ಧನೌಕೆ ಹಾಗೂ ಟಪ್ಲೋವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯಕ್ಕೆ ವೀಕ್ಷಕ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ಕಳೆದ 2025 ಡಿಸೆಂಬರ್ ತಿಂಗಳೊಂದರಲ್ಲೇ 5 ಲಕ್ಷ ರೂ. ಆದಾಯ ಬಂದಿದೆ. ಕಾರವಾರ ಕಡಲ ತೀರದಲ್ಲಿದ್ದ ಯುದ್ದದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಚಾಪೆಲ್ ಯುದ್ಧನೌಕೆಯ ವಸ್ತು ಸಂಗ್ರಹಾಯದ ಪಕ್ಕದಲ್ಲಿಯೇ ಟಪ್ಲೋವ್ ಯುದ್ಧ ವಿಮಾನವನ್ನು ಚೆನ್ನೈ ನಿಂದ ತಂದು ಪ್ರತಿಷ್ಠಾಪಿಸಲಾಯಿತು. ಭಾರತೀಯ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತ ಹೊಂದಿದ್ದ, ಟಪ್ಲೋವ್ ಯುದ್ಧ ವಿಮಾನದ ವಸ್ತು ಸಂಗ್ರಹಾಯವನ್ನು ಕಳೆದ ಎರಡು ವರ್ಷದ ಹಿಂದೆ ಸ್ಥಾಪಿಸಲಾಗಿತ್ತು.
2025 ಅಗಸ್ಟ 15 ರಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಉದ್ಘಾಟನೆಯ ಬಳಿಕ ವಸ್ತು ಸಂಗ್ರಹಾಲಯದ ಆದಾಯ ದುಪ್ಪಟ್ಟಾಗಿದ್ದು, 2025 ಡಿಸೆಂಬರ್ ತಿಂಗಳಲ್ಲಿಯೇ ಬರೋಬ್ಬರಿ 5 ಲಕ್ಷ ರೂ. ಆದಾಯ ಗಳಿಸಿದೆ. ಡಿಸೆಂಬರ್ ಒಂದೇ ತಿಂಗಳಲ್ಲಿ 14 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು ವಿಶೇಷವಾಗಿದೆ. ಯುದ್ಧ ವಿಮಾದ ವಸ್ತು ಸಂಗ್ರಹಾಲದ ಉದ್ಘಾಟನೆಗೂ ಮುನ್ನ ಪ್ರವಾಸಿಗರಿಗೆ ಯುದ್ಧ ನೌಕೆಯನ್ನು ಹೊರಗಿನಿಂದ ಮಾತ್ರ ವೀಕ್ಷಿಸಲು ಅವಕಾಶವಿತ್ತು. ಹೀಗಾಗಿ ದಿನಕ್ಕೆ 300 ರಿಂದ 400 ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಕಳೆದ ಡಿಸೆಂಬರ್ ನಲ್ಲಿ ಒಟ್ಟೂ 14 ಸಾವಿರ ಪ್ರವಾಸಿಗರು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ವರ್ಷಾಂತ್ಯ ಹಾಗೂ ಹೊಸ ವರ್ಷದಲ್ಲಿ ಪ್ರವಾಸಿಗರ ಸಂಖ್ಯೆಯು ಇನ್ನಷ್ಟು ಹೆಚ್ಚಾಗಿದೆ.
ಸಾಮಾನ್ಯವಾಗಿ ಯುದ್ಧ ವಿಮಾನ ಹಾಗೂ ಯುದ್ಧ ನೌಕೆ ವೀಕ್ಷಣೆಗೆ ಸೇರಿ ಒಂದು ಟಿಕೆಟ್‌ಗೆ 50 ರೂ. ಪಡೆಯಲಾಗುತ್ತಿದೆ. ಈ ಹಿಂದೆ ಶಾಲಾ ಮಕ್ಕಳಿಗೆ 10 ರೂ. ಟಿಕೆಟ್ ಮಾತ್ರ ತೆಗೆದುಕೊಳ್ಳಲಾಗುತ್ತಿದ್ದು, ಮುಂದೆಯೂ ಈ ನಿಯಮವನ್ನು ಮುಂದುವರೆಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಇದೀಗ ಶಾಲಾ ಮಕ್ಕಳ ಪ್ರವಾಸಗಳು ಆರಂಭವಾಗಿವೆ . ಪ್ರವಾಸೋದ್ಯಮಕ್ಕೆ ಹೆಸರಾದ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಶಾಲಾ ಪ್ರವಾಸ ತಂಡಗಳು ಆಗಮಿಸುತ್ತವೆ. ಹೀಗಾಗಿ ಮಕ್ಕಳ ಅನುಕೂಲಕ್ಕಾಗಿ ಈ ರೀತಿಯ ದರ ರಿಯಾಯಿತಿ ನೀಡಲಾಗಿದೆ.
ಎರಡೂ ವಸ್ತು ಸಂಗ್ರಹಾಲಯದಲ್ಲಿಯೂ ಸಣ್ಣ ಪ್ರಮಾಣದ ತುಕ್ಕು ಹಿಡಿಯುವಿಕೆ ಕಾಣಿಸಿಕೊಂಡಿದ್ದು, ನೌಕಾನೆಲೆಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲವನ್ನು ಸರಿಪಡಿಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ತಿಳಿಸಿದ್ದಾರೆ. ...... ಕೋಟ್... ಯುದ್ಧ ನೌಕೆ ಚಾಪೆಲ್, ಯುದ್ದ ವಿಮಾನ ಟಪ್ಲೋವ್ ವೀಕ್ಷಣೆಗೆ ವಿದ್ಯಾರ್ಥಿ ಪ್ರವಾಸಿಗರು ಹೆಚ್ಚು. ಅಲ್ಲದೆ ಬೀಚ್ ನಲ್ಲಿ ಹಲವು ಸೌಲಭ್ಯ ಕಲ್ಪಿಸಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. -ಮಂಗಳ ಗೌರಿ ಸಹಾಯಕ ನಿರ್ದೇಶಕರು. ಪ್ರವಾಸೋದ್ಯಮ ಇಲಾಖೆ. ಕಾರವಾರ ...
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 