ಕರಾವಳಿಯಲ್ಲಿ ಹೆಚ್ಚಿದ ರಭಸದ ಗಾಳಿ ಮಳೆ
Increased gusty winds and rain along the coast
ಕಾರವಾರ 02: ಉತ್ತರ ಕನ್ನಡ ಕರಾವಳಿಯಲ್ಲಿ ರಭಸದ ಗಾಳಿ ಮಳೆ ಹೆಚ್ಚಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲಿ ಗಳಲ್ಲಿ ನೆಲ ಮುಗಿಲು ಒಂದಾಗಿಸುವಂತೆ ಮಳೆ ಸುರಿದಿದೆ.
ಮುಂಡಗೋಡ ಹೊರತು ಪಡಿಸಿ ಎಲ್ಲೆಡೆ ಭರ್ಜರಿ ಮಳೆಯಾಗಿದೆ . ಹಳಿಯಾಳ , ಮುಂಡಗೋಡದಲ್ಲಿ ಕೃಷಿಕರಿಗೆ ಬೇಕಾಗುವಷ್ಟು ಮಳೆ ಸುರಿದಿದೆದಾಂಡೇಲಿಯಲ್ಲಿ ಹೆಚ್ಚು ಮಳೆಯಾಗಿದೆ. ಶಿರಸಿ, ಸಿದ್ದಾಪುರದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ಜನ ಜೀವನ ಎಂದಿನಂತೆ ಇತ್ತು . ಕಾರವಾರ, ಅಂಕೋಲಾದಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಹೊನ್ನಾವರ ಭಟ್ಕಳದಲ್ಲಿ ಸಹನೀಯ ಮಳೆ ಇದ್ದರೆ, ಕುಮಟಾ ದಿಂದ ಕಾರವಾರದ ತನಕ ಹೆಚ್ಚು ಮಳೆ ಸುರಿದಿದೆ. ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹ ಸೃಷ್ಟಿ ಆಗುವ ಮಟ್ಟದಲ್ಲಿ ಮಳೆ ಬಿದ್ದಿಲ್ಲ . ಡ್ಯಾಂ ಭರ್ತಿಯಾಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಡ್ಯಾಂ ಭರ್ತಿಯಾಗಿ, ನದಿ ದಂಡೆಯ ಗ್ರಾಮದಲ್ಲಿ ಹಠಾತ್ ಪ್ರವಾಹ ತಪ್ಪಿಸಲು ಕದ್ರಾ, ಸುಫಾ, ಕೊಡಸಳ್ಳಿ, ಗೇರುಸೊಪ್ಪ ಡ್ಯಾಂ ಭರ್ತಿಗೆ ಎರಡು ಮೀಟರ್ ಇರುವಾಗಲೇ ನದಿಗೆ ನೀರು ಬಿಟ್ಟು, ಜಲಾಶಯಗಳಿಂದಾಗುವ ಕೃತಕ ನೆರೆ ತಪ್ಪಿಸಲಾಗಿದೆ.
ಕಳ ವರ್ಷದಿಂದ ಈ ಕ್ರಮ ಅನುಸರಿಸಿ, ಜನರ ಆಸ್ತಿಪಾಸ್ತಿ ರಕ್ಷಣೆ ಮಾಡಲಾಗಿದೆ.ಹವಾಮಾನ ಇಲಾಖೆಯ ಸೂಚನೆಯಂತೆ ಇನ್ನೂ ಕೆಲದ ದಿನ ಮಳೆ ಮುಂದುವರಿಯಲಿದೆ.ಮಳೆ ವಿವರ:ಉತ್ತರ ಕನ್ನಡಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 52.9 ಮಿಮೀ, ಭಟ್ಕಳದಲ್ಲಿ 32.4 ,ಹಳಿಯಾಳ 10.4, ಹೊನ್ನಾವರ 38.6 ,ಕಾರವಾರ 53.1 ,ಕುಮಟಾ 40.1, ಮುಂಡಗೋಡ 6, ಸಿದ್ದಾಪುರ 54.1, ಶಿರಸಿ 50.3, ಸೂಪಾ 67.4, ಯಲ್ಲಾಪುರ 21.5, ದಾಂಡೇಲಿಯಲ್ಲಿ 25.5 ಮಿಲಿ ಮೀಟರ್ ಮಳೆ ಸುರಿದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 