ಮಹಾವೀರ ಮಲ್ಟಿಪರ​‍್ಪಸ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

ಮಹಾವೀರ ಮಲ್ಟಿಪರ​‍್ಪಸ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ  Inauguration of the new building of Mahaveera Multipurpose Cooperative Society


ಶಿರಗುಪ್ಪಿ 05 : ಶಿರಗುಪ್ಪಿಯಲ್ಲಿ ಮಹಾವೀರ ಮಲ್ಟಿಪರ​‍್ಪಸ ಸೌಹಾರ್ದ ಸಹಕಾರಿ ಸಂಘದ ನೂತನ ಸ್ವಂತ ಕಟ್ಟಡ ಸೋಮವಾರ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನೀಲಜಗಿ ತಿಳಿಸಿದರು. ನೂತನ ಶಾಖೆಯಲ್ಲಿ ಸುಸಜ್ಜಿತ ಲಾಕರ್ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿರಲಿವೆ. ಸಂಸ್ಥೆಯು ಬ್ಯಾಂಕಿಂಗ್ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.