ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ವಾರ್ಷಿಕ್ ಕ್ರೀಡಾಸ್ಪರ್ಧೆಯ ಉದ್ಘಾಟಿನೆ
Inauguration of the annual sports competition of Gommatesh Educational Institute
ಮಾಂಜರಿ 14: ಚೀಕೂಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಗೊಮಟೇಶ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಡಾ. ಏನ್. ಎ . ಮಗದುಮ್ ಸಿ. ಬಿ. ಎಸ್.ಇ. ಶಾಲೆಯಲ್ಲಿ ಗುರುವಾರ ರಂದು ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ಜರುಗಿತು.ಸಂಸ್ಥೆಯ ಖಜಾಂಚಿಗಳಾದ ಲಲಿತಾ. ಎನ್. ಮಾಗದುಮ್. ಇವರು ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡರು. ನಂತರ ಮೇಜರ್ ಧ್ಯಾನಚಂದ ಹಾಗೂ ಜವಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಇಂದಿನ ಮಕ್ಕಳು ನಾಳಿನ ಯುವಕರು, ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಗಳಲ್ಲಿ ಭಾಗವಹಿಸುವುದು ಮಹತ್ತರವಾಗಿದೆ. ಆದ್ದರಿಂದ ತಾವೆಲ್ಲರು ಶ್ರದ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಮಕ್ಕಳಿಗೆ ಹೇಳಿದರು. ಈ ಸಂದರ್ಭದಲ್ಲಿ ಬಿ.ಎ .ಎಂ.ಎಸ್. ಕಾಲೇಜಿನ ಪ್ರಾಚಾರ್ಯರಾದ ಪ್ರಸನ್ನ ಸವಣೂರು, ಸಿ.ಬಿ.ಎಸ್.ಇ ಶಾಲೆಯ ಪ್ರಾಚಾರ್ಯರಾದ ಎನ್ .ಎಸ್. ನಿಡಗುಂದೆ, ಎಸ್. ಎಸ್ .ಕುಲಕರ್ಣಿ ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ರಾಜು ಕುಂಬಾರ, ಶೇಖರ ಕಾಂಬಳೆ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದರು. ಸಹ ಶಿಕ್ಷಕರಾದ ಸಂತೋಷ ಚೌಹಾಣ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಸಹ ಶಿಕ್ಷಕರು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಟೀನಾ ಜೋಶಿ ಕಾರ್ಯಕ್ರಮ ಕಾರ್ಯಕ್ರಮವನ್ನು ನಿರೂಪಿಸಿದಳು, ನವ್ಯಾ ಲಂಗೋಟೆ ಸ್ವಾಗತಿಸಿದಳು. ವಿದ್ಯಾರ್ಥಿಯಾದ ವಿನಾಯಕ ನಾಯಕ್ ವಂದಿಸಿದನು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 