ಪೂರ್ವ ವಲಯ ಮಟ್ಟದ ಪ್ರೌಢಶಾಲೆ ಕ್ರೀಡಾಕೂಟ ಉದ್ಘಾಟನೆ

ಪೂರ್ವ ವಲಯ ಮಟ್ಟದ ಪ್ರೌಢಶಾಲೆ ಕ್ರೀಡಾಕೂಟ ಉದ್ಘಾಟನೆ  Inauguration of the East Zone High School Sports Meet


ತಾಳಿಕೋಟೆ  08: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ ವಿ ಪಿ ಎಮ ಮತ್ತು ಸೆಕ್ರೇಡ್ ಹಾರ್ಟ್‌ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ 2026-2 7ನೇ ಸಾಲಿನ ತಾಳಿಕೋಟಿ ಪೂರ್ವ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಆರ ಬಿ ದಮ್ಮೂರಮಠ ಕ್ಷೇತ್ರ ಸಮನ್ವಯಾಧಿಕಾರಿಗಳು ಉದ್ಘಾಟನೆ ನೆರವೇರಿಸಿದರು.

ಈ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ ಇಂಗ್ಲಿಷ ಶಿಕ್ಷಣ ನೀಡಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಕ್ರಿಯವಾಗಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿ ಅನೇಕ ಬಗೆಯ ಪ್ರತಿಭೆಗಳು ಆಡಗಿರುತ್ತವೆ. ಅದನ್ನು ಗುರುತಿಸಿ ಹೊರ ಹಾಕುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ವರ್ಷದಲ್ಲಿ ಎರಡು ತಿಂಗಳ ಕ್ರೀಡಾಕೂಟ ಭಾಗವಹಿಸಿ ಮರೆಯ ಬಾರದು ನಿರಂತರ ಕ್ರೀಡೆಯಲ್ಲಿ ತೊಡಗಿದರೆ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಕ್ರೀಡೆಯು ವಿದ್ಯಾರ್ಥಿಗಳನ್ನು ಕ್ರಿಯಾಶೀಲರಾಗಿ ಮಾಡುವುದರ ಜೊತೆಗೆ ಉತ್ಸಾಹ ತುಂಬಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫಾದರ್ ಸುನೀಲ ಅಂದ್ರಾದೇ ಅಧ್ಯಕ್ಷರು ವಿ ಪಿ ಎಮ ಮತ್ತು ಸೇಕ್ರೆಡ್ ಹಾರ್ಟ್‌ ಆಂಗ್ಲ ಮಾಧ್ಯಮ ಶಾಲೆ, ಕಾಶಿನಾಥ ಸಜ್ಜನ ಬಿ ಆರ್ ಪಿ, ರಾವುತ ಪೂಜಾರಿ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷರು, ಸಿಸ್ಟರ ಐರನ್ ತಾಮ್ರೋ ಮುಖ್ಯಗುರುಮತೆಯರು, ಭೀಮರಾಯ ಸೂಳಿಭಾವಿ, ಶ್ರೀಪಾದ ಜೋಷಿ, ವಿಶ್ವನಾಥ ಪಾಟೀಲ ಸಂಘಟಕರು, ದೈಹಿಕ ಶಿಕ್ಷಕರಾದ ಎಂ ಎಸ ರಾಯಗೊಂಡ, ಮಲ್ಲನಗೌಡ ಪಾಟೀಲ, ಹಿರೇಗೆಪ್ಪಾ ಭಜಂತ್ರಿ, ಮಹೇಶ ಚಲವಾದಿ, ಮಾಳಿಂಗರಾಯ ಪೂಜಾರಿ, ಬಸವರಾಜ ಚಳ್ಳಗಿ, ಎಸ ಎಸ ಪಾಟೀಲ, ಶಿವಾನಂದ ಹಿರೇಮಠ ಹಲವರು ಭಾಗವಹಿಸಿದ್ದರು.