ಆಯುಕೇರ್ ವೆಲ್‌ನೆಸ್ ಸಂಸ್ಥೆಯ ಮುಖ್ಯ ಕಛೇರಿ ಉದ್ಘಾಟನೆ

ಅಥಣಿ  25: ತಲೆ ನೋವಿನಿಂದ ಮಾರಕ ಕ್ಯಾನ್ಸರ ರೋಗದವರೆಗೂ ಒಳ್ಳೆಯ ಗುಣಮಟ್ಟದ ಆಯುರ್ವೇದ ಓಷಧಗಳನ್ನು ಎಂದು ನೀಡುತ್ತಿದೆ ಆಯುಕೇರ್ ವೆಲ್‌ನೆಸ್ ಸಂಸ್ಥೆಯ ಕರ್ನಾಟಕ ರಾಜ್ಯ ಮುಖ್ಯಸ್ಥ ಮುದಕಪ್ಪ ಜಮಖಂಡಿ ಹೇಳಿದರು.  

ಅವರು ಆಯುಕೇರ್ ವೆಲ್‌ನೆಸ್ ಸಂಸ್ಥೆಯ ಕಾರ​‍್ೋರೆಟ್ ಮುಖ್ಯ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.  

ಇತ್ತೀಚಿನ ಜೀವನ ಶೈಲಿ, ಆಹಾರ ಪದ್ಧತಿ ಪರಿಣಾಮ ಚಿಕ್ಕ ಮಕ್ಕಳಿಂದ ವೃದ್ಧರ ವರೆಗೂ ಹೃದಯ, ಕಿಡ್ನಿ, ಹೊಟ್ಟೆ, ಲಿವ್ಹರ್, ಕಣ್ಣು, ಕಾಲುಗಳಿಗೆ ಅನೇಕ ಕಾಯಿಲೆಗಳು ಕಾಡುತ್ತಿವೆ ಎಂದ ಅವರು ಸಮಯಕ್ಕೆ ಸರಿಯಾಗಿ ಮತ್ತು ಬೇರೆ ಅಂಗಗಳಿಗೆ ಕೆಟ್ಟ ಪರಿಣಾಮ ಬೀರದಂತಹ ವಿಶ್ಚಾಸಾತ್ಮಕ ಓಷಧಗಳ ಕೊರತೆ ಇದ್ದು, ಈ ಕೊರತೆಯನ್ನು ಆಯು ಕೇರ್ ವೆಲ್ ನೆಸ್ ಸಂಸ್ಥೆ ಉತ್ತಮ ಗುಣಮಟ್ಟದ ಆಯುರ್ವೆದ ಓಷಧ ನೀಡುವ ಮೂಲಕ ನೀಗಿಸಿದೆ ಎಂದರು.  

ಆಯು ಕೇರ್ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕಾರ್ಯನಿರ್ವಸುತ್ತಿದ್ದು, ಈ ಮೂಲಕ ಒಳ್ಳೆಯ ಗುಣಮಟ್ಟದ ಆಯುರ್ವೇದ ಓಷಧಗಳನ್ನು ಎಲ್ಲ ಕಾಯಿಲೆಗಳಿಗೆ ನೀಡುತ್ತಿದೆ ಎಂದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, ಇತ್ತೀಚಿಗೆ ಎಲ್ಲರೂ ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಿದ್ದು, ಅನೇಕರಿಗೆ ಓಷಧಗಳ ಬಗೆಗೆ ಮಾಹಿತಿಯೇ ಇಲ್ಲ ಹೀಗಾಗಿ ಕಾಯಿಲೆ ಉಲ್ಬಣಗೊಳ್ಳುತ್ತಿವೆ ಎಂದ ಅವರು ಎಲ್ಲ ಕಾಯಿಲೆಗಳಿಗೆ ಆಯುರ್ವೇದ ಓಷಧಗಳನ್ನು ಆಯು ಕೇರ್ ಸಂಸ್ಥೆ ನೀಡುತ್ತಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.  

ಆಯುಕೇರ್ ವೆಲ್ ನೆಸ್  ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಸಂತೋಷ ಕಾಳೇಲಿ ಮಾತನಾಡಿ, ಅಯುಕೇರ್ ಸಂಸ್ಥೆ ಈಗಾಗಲೇ ರಾಜ್ಯದ ಅನೇಕ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಥಣಿಯಲ್ಲಿ ಈ ಸಂಸ್ಥೆಯ ಮುಖ್ಯ ಕಛೇರಿ ಇಂದು ಉದ್ಘಾಟನೆಯಾಗಿದೆ. ಈ ಸಂಸ್ಥೆಯ ಮೂಲಕ ಎಲ್ಲ ರೋಗಳಿಗೆ ಸ್ಥಳದಲ್ಲಿಯೇ ತಜ್ಞ ವೈದ್ಯರಿಂದ ತಪಾಸಣೆ ಮಾಡಿ ಅಯುರ್ವೇದ ಓಷಧ ನೀಡಲಾಗುವುದು ಎಂದ ಅವರು ಅನೇಕ ವರ್ಷಗಳಿಂದ ಕಡಿಮೆಯಾಗದ ರೋಗಗಳಿಗೂ ಇಲ್ಲಿ ಪರಿಹಾರ ನೀಡಲಾಗಿದೆ ಎಂದರು.  

ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಆಯುಕೇರ್ ಸಂಸ್ಥೆಯಿಂದ ರೋಗಿಗಳಿಗೆ ನೀಡಲಾಗುತ್ತಿರುವ ಓಷಧಗಳ ಗುಣಮಟ್ಟವನ್ನು ಮುಂದೆಯೂ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.  

ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ, ಕಾಂಗ್ರೆಸ್ ಮುಖಂಡ ಎಸ್‌.ಕೆ.ಬುಟಾಳಿ, ಆಯುಕೇರ್ ನ ಸಂತೋಷ ಧನವಾಡೆ, ಶೈಲೇಶ ಭೋಸಲೆ, ನಾರಾಯಣ ದೇಸಾಯಿ, ಸುಶೀಲಕುಮಾರ ಕೊಪಡೆ, ಪರಶುರಾಮ ಕುಲ್ಲೊಳೆ, ಶರಣು ಗಳವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.   ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.