ಸಾಯಿ ಶೂರ್ ಹೆಲ್ತ್‌ ಮಿಕ್ಸ್‌ ತಾಲೂಕ ಮಟ್ಟದ ಉದ್ಘಾಟನಾ ಕಾರ್ಯಕ್ರಮ

ಬ್ಯಾಡಗಿ 23: ಆರೋಗ್ಯವೇ ಇಲ್ಲದಿದ್ದರೇ ನಮ್ಮ ಬಳಿ ಏನಿದ್ದರೇನು ಪ್ರಯೋಜನ ಮೊದಲು ನಾವೆಲ್ಲರೂ ಆರೋಗ್ಯದ ಕಡೆ ಗಮನ ನೀಡುವಂತೆ ತಾ.ಪಂ.     ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.  

ಗುರುವಾರ ಅವರು ತಾಲೂಕಿನ ಬಿಇಎಸ್ ಫ್ರೌಢ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಶನ್ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ ಸಾಯಿ ಶೂರ್ ಹೆಲ್ತ್‌ ಮಿಕ್ಸ್‌ ತಾಲೂಕ ಮಟ್ಟದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.ಮಕ್ಕಳು ಉತ್ತಮ ಆರೋಗ್ಯ ಹೊಂದಬೇಕಾದರೆ ಪ್ರತಿದಿನ ಹೆಚ್ಚು ಪೌಷ್ಟಿಕಾಂಶ  ಆಹಾರಗಳನ್ನು ಮಕ್ಕಳು ಸೇವಿಸುವುದು ಉತ್ತಮ. ಈ ಹಿನ್ನೆಲೆಯಲ್ಲಿ ಪ್ರತಿ  ಮಕ್ಕಳಿಗೆ ಮನೆಯಲ್ಲಿ ಪೌಷ್ಟಿಕಾಂಶ ಕೊಡುವಲ್ಲಿ ವಿಳಂಬವಾಗ ಬಹುದು. ಸರ್ಕಾರ ಇಂದು ಶಾಲೆಯಲ್ಲಿ ನೀಡುತ್ತಿರುವ ರಾಗಿ ಮಾಲ್ಟನಿಂದ ಮಕ್ಕಳು ಸದೃಢ ಆರೋಗ್ಯ ಹೊಂದಿ, ಸದೃಢ ಬುದ್ದಿವಂತರಾಗಿ ಸದೃಢ ದೇಶ ಕಟ್ಟುವಲ್ಲಿ ಮುಂದಾಗುತ್ತಾರಲ್ಲದೇ ಸರ್ಕಾರದ ಈ ಯೋಜನೆಯನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಲು ಹೇಳಿದರು.  

ತಾಲೂಕಾ ಅಕ್ಷರ ದಾಸೋಹಧಿಕಾರಿ   

ಎನ್ .ತಿಮ್ಮಾರೆಡ್ಡಿ  ಮಾತನಾಡಿ ಪ್ರಧಾನಮಂತ್ರಿ ಪೋಶನ್ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ ಕ್ಷೀರಭಾಗ್ಯದ ಜೊತೆಗೆ ಸಾಯಿ ಶೂರ್ ರಾಗಿ ಮಾಲ್ಟ್‌  ನೀಡುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಿದೆ. ಪ್ರಧಾನ ಮಂತ್ರಿ ಪೋಶನ್ ಶಕ್ತಿ  ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿ ಊಟ, ಮೊಟ್ಟೆ ವಿತರಣೆ ಕ್ಷೀರ ಭಾಗ್ಯ ಯೋಜನೆ, ಹೊಸದಾಗಿ ರಾಗಿ ಮಾಲ್ಟ್‌ ನೀಡುವುದರಿಂದ ಮತ್ತಷ್ಟು ಶೈಕ್ಷಣಿಕ ಪ್ರಗತಿ ಸಾಧ್ಯವಾಗಲಿದೆ ಎಂದರು.  

ಕ್ಷೇತ್ರ ಸಂಪನ್ಮೂಲಅಧಿಕಾರಿ ಮಲ್ಲೇಶಪ್ಪ ಹುಲ್ಯಾಳ ಮಾತನಾಡಿ ಯೋಜನೆಯನ್ನು ಸಮರ​‍್ಕವಾಗಿ ಜಾರಿಗೆ ತರುವುದರ ಮೂಲಕ ಕ್ಷೀರ ಭಾಗ್ಯ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ  ಮುಖ್ಯೋಪಾಧ್ಯಾಯ  ಉಮಾಪತಿ ಸೇರಿದಂತೆ ಇತರರಿದ್ದರು.