ಇಷ್ಟಪಟ್ಟು ಓದಿದರೆ ಇಚ್ಛಿತ ಜೀವನ ಸಾಧ್ಯ: ಉಪತಹಶೀಲ್ದಾರ ಕಾಂಬಳೆ
If you enjoy reading, you can live the life you want: Sub-Tahsildar Kambale
ರಬಕವಿ-ಬನಹಟ್ಟಿ 16: ಆಯಾ ಕಾಲಘಟ್ಟಗಳಲ್ಲಿನ ನಮ್ಮ ಜವಾಬ್ದಾರಿಗಳನ್ನು ಮರೆತರೆ ಬದುಕು ಸುಂದರವಾಗದು. ವಿದ್ಯಾರ್ಥಿ ದೆಸೆಯಲ್ಲಿ ಕಷ್ಟ ಪಟ್ಟು ಓದದೇ ಇಷ್ಟ ಪಟ್ಟು ಓದಿದಲ್ಲಿ ಇಚ್ಛಿತ ಜೀವನ ನಿಮ್ಮದಾಗುತ್ತದೆಂದು ರಬಕವಿ-ಬನಹಟ್ಟಿ ಉಪತಹಶೀಲ್ದಾರ ಸದಾಶಿವ ಕಾಂಬಳೆ ಹೇಳಿದರು.
ಹನಗಂಡಿ ಗ್ರಾಮದ ಸರ್.ಸಿ.ವಿ.ರಾಮನ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳು ಶಾಲೆಯಿಂದ ಮನೆಗೆ ಮರಿಳಿದ ತಕ್ಷಣ ಅಂಡ್ರಾಯ್ಡ್ ಫೋನ್ ಬಳಸುತ್ತ ವೃಥಾ ಕಾಲಹರಣ ಮಾಡುವುದು ತರವಲ್ಲ. ಇಷ್ಟದ ಓದು ಕಷ್ಟವಾದಲ್ಲಿ ಭವಿತವ್ಯದ ಇಚ್ಛಿತ ಬದುಕು ನಿಮ್ಮದಾಗದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಉತ್ತಮ ಸಂಸ್ಕಾರವಂತರಾಗಿ, ಸಮಾಜಕ್ಕೆ, ಪೋಷಕರಿಗೆ ಮತ್ತು ದೇಶಕ್ಕೆ ಹೆಮ್ಮೆಯ ಆಸ್ತಿಯಾಗಿ ಎಂದರು.
ಧುರೀಣ ಪ್ರಸನ್ನಕುಮಾರ ದೇಸಾಯಿ ಮಾತನಾಡಿ, ಶಾಲಾ ಮುಖ್ಯಸ್ಥ ದಿಗ್ಗೇವಾಡಿ ಮತ್ತವರ ತಂಡ ಮಾಜಿ ಸೈನಿಕರಿಗೆ, ಶಿಕ್ಷಕರಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸುವ ಮೂಲಕ ಗುರುತಿಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯವೆಂದರು. ಮಹ್ಮದ್ ರಫೀಕ್ ದಿಗ್ಗೇವಾಡಿ, ರಂಜಾನ್ ದಿಗ್ಗೇವಾಡಿ ಸೇರಿದಂತೆ ಶಾಲಾ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 