ಎಚ್. ಕೆ. ಪಾಟೀಲರನ್ನು ಕಡೆಗಣಿಸಿದರೆ ಮಂತ್ರಿಗಳಿಗೆ ಕ್ಷೌರಸೇವೆ ಬಹಿಷ್ಕಾರ: ಸರ್ಕಾರಕ್ಕೆ ಸವಿತಾ ಸಮಾಜ ಮಹಾ ಎಚ್ಚರಿಕೆ
If H. K. Patil is ignored, ministers will boycott hairdressing services: Savita Samaj Maha warns the
ಗದಗ 14: "ರಾಜ್ಯ ರಾಜಕಾರಣದ ಧೀಮಂತ ಮುತ್ಸದ್ದಿ, ಗದಗ ಜಿಲ್ಲೆಯ ಜನಪ್ರಿಯ ನಾಯಕ ಹಾಗೂ ಜನಪರ ಕಾಳಜಿಯ ಸಾಕಾರ ಮೂರ್ತಿ ಸನ್ಮಾನ್ಯ ಶ್ರೀ ಎಚ್. ಕೆ. ಪಾಟೀಲ್ ಸಾಹೇಬರನ್ನು ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲಿ ಸೇರಿಸಿ ತಕ್ಷಣ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಾದರಿಯಲ್ಲಿ, ಎಲ್ಲಾ ನೂತನ ಮಂತ್ರಿಗಳಿಗೆ ಕ್ಷೌರಸೇವೆ ನಿಷೇಧಿಸುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಚ್. ಕೆ. ಪಾಟೀಲ್ ಅವರು ದಶಕಗಳಿಂದ ಪ್ರಾಮಾಣಿಕತೆ, ನೈತಿಕತೆ ಮತ್ತು ಸ್ವಚ್ಛ ಆಡಳಿತಕ್ಕೆ ಹೆಸರಾದವರು. ಇಂತಹ ಹಿರಿಯ ನಾಯಕರ ಉಪಸ್ಥಿತಿ ನೂತನ ಸರ್ಕಾರಕ್ಕೆ ಆನೆಬಲ ತರಲಿದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಇಡೀ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಅವರು ಸ್ಥಾಪಿಸಿದ ’ಶುದ್ಧ ಕುಡಿಯುವ ನೀರಿನ ಘಟಕಗಳು’ ಇಂದಿಗೂ ಕೋಟ್ಯಂತರ ಬಡವರ ದಾಹ ನೀಗಿಸುತ್ತಿವೆ.
ಇಂತಹ ದೂರದೃಷ್ಟಿಯ ನಾಯಕನನ್ನು ಕಡೆಗಣಿಸುವುದು ಜನತೆಗೆ ಮಾಡುವ ದ್ರೋಹ ಎಂದು ಕಿಡಿ ಕಾರಿದರು. ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ ಅವರು ಮಾತನಾಡಿ ಕಾನೂನು ಸರ್ಕಾರಕ್ಕೆ ಯಾವುದೇ ಆಡಳಿತಾತ್ಮಕ ಅಥವಾ ಕಾನೂನು ಚೌಕಟ್ಟಿನ ತೊಡಕುಗಳು ಎದುರಾದಾಗ ಹಳಿ ತಪ್ಪದಂತೆ ಮುನ್ನಡೆಸಲು ಇವರ ಸಂಸದೀಯ ಅನುಭವ ತೀರಾ ಅಗತ್ಯವಾಗಿದೆ. ಮತ್ತು ಸಮಗ್ರ ಉತ್ತರ ಕರ್ನಾಟಕ ಹಾಗೂ ಗದಗ ಜಿಲ್ಲೆಯ ಅಭಿವೃದ್ಧಿಯ ಧ್ವನಿಯಾಗಿರುವ ಇವರನ್ನು ಕೈಬಿಟ್ಟರೆ, ಈ ಭಾಗದ ಜನರಲ್ಲಿ ಪ್ರಾದೇಶಿಕ ಅಸಮತೋಲನದ ತೀವ್ರ ಅಸಮಾಧಾನ ಭುಗಿಲೇಳಲಿದೆ ಎಂದರು
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 