ಸಾರ್ವಜನಿಕ ಮೈದಾನದಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ

ಸಾರ್ವಜನಿಕ ಮೈದಾನದಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ IPL cricket festival in public grounds

ಕೊಪ್ಪಳ 30: ನಗರದ ಸಾರ್ವಜನಿಕ ಮೈದಾನದಲ್ಲಿ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಸಂಸದ ಕೆ ರಾಜಶೇಖರ್ ಹಿಟಾಳ್ ಅವರ ಸಾರಥ್ಯದಲ್ಲಿ ಎರಡನೇ ಬಾರಿಗೆ ಐಪಿಎಲ್ 19ರ ಆರ್ಸಿಬಿ ಮತ್ತು ಜಿಟಿ ನಡುವೆ ನಡೆಯಲಿರುವ ಐಪಿಎಲ್ ಅಂತಿಮ ಪಂದ್ಯವನ್ನು ವೀಕ್ಷಿಸಲು ಬೃಹತ್ ಎಲ್‌ಇಡಿ ಪರದೆ ಗೂಸ್ ಬಂ ಸೌಂಡ್ ಸಿಸ್ಟಮ್ ಮೂಲಕ ತೋರಿಸುವ ಕಾರ್ಯಕ್ರಮವನ್ನು ಮೇ 31ರಂದು ಸಂಜೆ 5:00 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.14*30 ಹಾಗೂ 10*16 ಎರಡು ಪರದೆ ಹಾಕಲಾಗುತ್ತದೆ ಜೊತೆಗೆ ಸುಮಾರು ಐಸು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನ ಮೀಸಲು ಇಡಲಾಗಿದೆ ಪೊಲೀಸ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಪಂದ್ಯಾಟದ ವೀಕ್ಷಣೆ ನಡೆಯಲಿದೆ, ಕಳೆದ ಬಾರಿ ಇದೇ ರೀತಿ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಅದರ ಯಶಸ್ಸಿನ ಕಾರಣ ಮತ್ತೊಮ್ಮೆ ಫೈನಲ್ ಗೆ ಪ್ರವೇಶ ಪಡೆದ ಆರ್ಸಿಬಿ ಗೆಲುವು ಸಾಧಿಸಲಿ ಎಂದು ಕ್ರಿಕೆಟ್ ಪ್ರೇಮಿಗಳು ಹಂಬಲಿಸುತ್ತಿದ್ದಾರೆ.