ಕಾರವಾರ ನೌಕಾನೆಲೆಯಲ್ಲಿ ಐಎನ್‌ಎಸ್ ‘ಮಾಲ್ವನ್‌’ ಯುದ್ಧನೌಕೆ ಸೇರೆ​‍್ಡ

ಕಾರವಾರ ನೌಕಾನೆಲೆಯಲ್ಲಿ ಐಎನ್‌ಎಸ್ ‘ಮಾಲ್ವನ್‌’ ಯುದ್ಧನೌಕೆ ಸೇರೆ​‍್ಡ INS ‘Malvan’ warship inducted at Karwar Naval Base

ಕಾರವಾರ 22: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಿರ್ಮಿಸಲಾದ ಐಎನ್‌ಎಸ್ ಮಾಲ್ವನ್ ಯುದ್ಧನೌಕೆಯನ್ನು ಕಾರವಾರ ಸಮೀಪದ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ಸೇವೆಗೆ ಸೇರೆ​‍್ಡಗೊಳಿಸಲಾಯಿತು.  

ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಯುದ್ಧನೌಕೆಯನ್ನು ಲೋಕಾರೆ​‍್ಣ ಮಾಡಿದರು. ಬಳಿಕ ಮಾತನಾಡಿದ ಅವರು, ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ಈ ಯುದ್ಧನೌಕೆ ದೇಶದ ಸಮುದ್ರ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ.

ಕರಾವಳಿ ಕಣ್ಗಾವಲು ಹಾಗೂ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ರಾಷ್ಟ್ರದ ಭದ್ರತೆ ಮತ್ತು ಸುರಕ್ಷಿತ ಸಮುದ್ರ ವ್ಯಾಪಾರಕ್ಕೆ ಪೂರಕವಾಗಲಿದೆ ಎಂದು ಹೇಳಿದರು.  

ಪಶ್ಚಿಮ ನೌಕಾ ಕಮಾಂಡ್ನ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್ ಮಾತನಾಡಿ, ಕಾರವಾರ ನೌಕಾನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ವರ್ಗದ ಯುದ್ಧನೌಕೆಯನ್ನು ಸೇವೆಗೆ ಸೇರೆ​‍್ಡಗೊಳಿಸಿರುವುದು ವಿಶೇಷ. ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.  

ಕೊಚ್ಚಿನ್ ಶಿಪ್ಯಾರ್ಡ್‌ ಲಿಮಿಟೆಡ್ ನಿರ್ಮಿಸಿರುವ ಈ ಯುದ್ಧನೌಕೆಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳನ್ನು ಅಳವಡಿಸಲಾಗಿದೆ. 78.8 ಮೀಟರ್ ಉದ್ದ ಹಾಗೂ 1,150 ಟನ್ ತೂಕ ಹೊಂದಿರುವ ಈ ನೌಕೆ 30 ಎಂಎಂ ನೌಕಾ ಗನ್, ಟಾರ​‍್ಿಡೊ ಲಾಂಚರ್ಗಳು, ರಾಕೆಟ್ ಲಾಂಚರ್ಗಳು, ‘ಅಭಯ್‌’ ಸೋನಾರ್ ಸೇರಿದಂತೆ ಅತ್ಯಾಧುನಿಕ ಯುದ್ಧ ವ್ಯವಸ್ಥೆಗಳನ್ನು ಹೊಂದಿದೆ.  

ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ ‘ಮಾಲ್ವನ್‌’ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ನೌಕಾ ಪರಂಪರೆಗೆ ಗೌರವ ಸಲ್ಲಿಸುವ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ನೌಕೆಯ ಚಿಹ್ನೆಯಲ್ಲಿ ಶೌರ್ಯ ಮತ್ತು ಚುರುಕುತನದ ಸಂಕೇತವಾದ ‘ಬಾಘ್ ನಖ್‌’ (ಹುಲಿಯ ಉಗುರು) ಅಳವಡಿಸಲಾಗಿದೆ.  

ಕಾರ್ಯಕ್ರಮದಲ್ಲಿ ನೌಕೆಯ ಕಮಾಂಡರ್ ಪ್ರವೀಣಕುಮಾರ್ ತಿವಾರಿ, ಕೊಚ್ಚಿನ್ ಶಿಪ್ಯಾರ್ಡ್ನ ವ್ಯವಸ್ಥಾಪಕ ನಿರ್ದೇಶಕ ಜೋಸ್ ವಿ.ಜೆ. ಸೇರಿದಂತೆ ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.