ಹುನ್ನೂರ: ಎಸ್‌ಎಸ್‌ಎಲ್‌ಸಿ ಹಳೆ ವಿದ್ಯಾರ್ಥಿಗಳಿಂದ ನಾಮಫಲಕ ಕೊಡುಗೆ ನಾಮಫಲಕ
Hunnur: SSLC alumni donate nameplate nameplate
ಜಮಖಂಡಿ 31: ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆ ವಿದ್ಯಾರ್ಥಿಗಳಿಂದ ನೂತನ ಕೊಡುಗೆಯಾಗಿ ನಾಮಫಲಕ ನೀಡಿದರು.
ಹಳೆ ವಿದ್ಯಾರ್ಥಿಯ ಶಂಕರಗೌಡ ಚಿಕ್ಕನಗೌಡ ಮಾತನಾಡಿ, ನಮ್ಮದು ಬಹಳ ದಿನದ ಕನಸು ನಾವು ಕಲಿತ ಶಾಲೆಗೆ ಏನಾದರೂ ನೀಡಬೇಕೆಂದು ಅದಕ್ಕೆ ನಾವು ಸ್ನೇಹ, ಪ್ರೀತಿಯ ಸೂಚಕವಾಗಿ ನಾಮಫಲಕ ನೀಡಿದ್ದೇವೆ. ನಾಮಫಲಕಕ್ಕೆ ಅವಕಾಶ ಮಾಡಿಕೊಟ್ಟ ಶಾಲೆ ಗುರುಗಳಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.
ಪ್ರಾಂಶುಪಾಲ ಸಂತೋಷ ತಳಕೇರಿ ಮಾತನಾಡಿ, ಬಹಳ ವರ್ಷ ಕಳೆದು ಹೋಗಿರುವ ಶಾಲೆ 1964 ರಲ್ಲಿ ಉದ್ಘಾಟನೆ ಆಗಿದೆ. ಸುಮಾರು 60 ವರ್ಷಗಳ ನಂತರ ಪ್ರೌಢ ಶಾಲೆ ಕಲಿತ ವಿದ್ಯಾರ್ಥಿಗಳು ನಾಮಫಲಕ ನೀಡಿದ್ದು ಹೆಮ್ಮೆಯ ಸಂಗತಿ, ಕಲಿತಿರುವ ವಿದ್ಯಾರ್ಥಿಗಳು ಇವಾಗ ಉನ್ನತ ಹುದ್ದೆಯಲ್ಲಿದ್ದಾರೆ. ಈಗಿನ ವಿದ್ಯಾರ್ಥಿಗಳು ಕೂಡಾ ಶಾಲೆಯಲ್ಲಿ ಪ್ರಮುಖ ವಿದ್ಯೆ ಸಂಸ್ಕಾರ ಜೀವನ ಮಾರ್ಗಕ್ಕೆ ಬೇಕಾಗುವ ಎಲ್ಲವನ್ನು ಕಲಿಯಬೇಕು ಹಾಗೂ ಉನ್ನತ ಸ್ಥಾನದಲ್ಲಿ ಇರಲು ಪ್ರಯತ್ನಿಸಬೇಕು ಎಂದರು.
ಹುನ್ನೂರ ಹೈಸ್ಕೂಲ ಎಸ್ ಡಿ ಎಮ್ ಸಿ ಅಧ್ಯಕ್ಷ ರಮೇಶ ಹಳಮನಿ, ಶಿಕ್ಷಕ ಕಳ್ಳಿಮಠ, ಶಿಕ್ಷಕ ಜೇಡಿ ಮಠ, ಶಿಕ್ಷಕ ಹೂಗಾರ, ಶಿವಶಂಕರ ಮಠದ, ಮಲ್ಲಪ್ಪ ಭುಜರುಖ,ಮುತ್ತಪ್ಪ ತೇಲಿ, ಉಮೇಶ ತೇಲಿ, ಶ್ರೀಶೈಲ್ ತೇಲಿ, ಮಂಜುನಾಥ ತೇಲಿ, ಆರ್ಮಿ ವಿನಾಯಕ ಚಿಂಚಖಂಡಿ, ಬಸವರಾಜ ಕೋರಿ, ಬಸವರಾಜ ಗುಳೇದ, ಶಾಂತು ರೂದಳಬಂಡಿ, ಶಂಕರ ಚಿಕ್ಕನಗೌಡರ, ಶಿವಾನಂದ ಸಾವಳಗಿ, ಪ್ರವೀಣ ಕೆರಕಲಮಟ್ಟಿ, ಧರೆಪ ತೇಲಿ ಅನೇಕರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 