ಹುಕ್ಕೇರಿ ಹಿರೇಮಠ2025ರ ದಸರಾ ಉತ್ಸವ ಪೂರ್ವಭಾವಿ ಸಭೆ
Hukkeri Hiremath 2025 Dasara Festival Preparatory Meeting
ಹುಕ್ಕೇರಿ 20: ಹಿರೇಮಠ ದಸರಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜರಗಿತು ಸಪ್ಟೆಂಬರ್ 22 ರಿಂದಾ ಅಕ್ಟೋಬರ್ 02 ರವರೆಗೆ ಪ್ರತಿ ದಿನ ದಸರಾ ಉತ್ಸವದಲ್ಲಿ ಹೋಳಿಗೆ ಊಟ ಅನ್ನಪ್ರಸಾದ ಜರುಗುವುದು ಹಾಗೂ "ಶ್ರೀ ಗುಡ್ಡಾಪೂರ ದಾನಮ್ಮ ದೇವಿ"ಪುರಾಣ ಪ್ರವಚನಪ್ರತಿ ದಿವಸ ಸಾಯಂಕಾಲ 6-30ಕ್ಕೆ ಪ್ರವಚನಕಾರರಾದ ಆಶುಕವಿ. ಪೂಜ್ಯ ಕುಮಾರ ಸ್ವಾಮಿಗಳು ಭೂದಿಸ್ವಾಮಿ ಹಿರೇಮಠ ಅಂತೂರ-ಬೆಂತೂರ ಇವರಿಂದ ಪುರಾಣ ಪ್ರವಚನ ಜರುಗುವುದು.
ದಸರಾ ಉತ್ಸವ ಉದ್ಘಾಟಕರಾದ ಷಡಕ್ಷರಿ ಬ್ರಹ್ಮೇಂದ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಇವರ ಅಮೃತ ಹಸ್ತದಿಂದ ದಿನಾಂಕ: 22-09-2025 ರಂದು ಮುಂಜಾನ - 10-30 ನಿಮಿಷಕ್ಕೆದಸರಾ ಉತ್ಸವ ಉದ್ಘಾಟನೆ ನೆರವೇರುವುದುದಿನ ನಿತ್ಯದ ಕಾರ್ಯಕ್ರಮಗಳು : ಮುಂಜಾನೆ 6-00 ಕ್ಕೆ ಸುಪ್ರಭಾತ ಮುಂಜಾನೆ 7-00 ಕ್ಕೆ ಗುರುಶಾಂತೇಶ್ವರರಿಗೆ ರುದ್ರಾಭಿಷೇಕ ಮುಂಜಾನೆ 8-00 ದೇವಿ ಪುರಾಣ ಪಾರಾಯಣ ಮುಂಜಾನೆ 10-00 ಕ್ಕೆ ಚಂಡಿಕಾ ಹೋಮ ಮಧ್ಯಾಹ್ನ 12-00 ಕ್ಕೆ ಶ್ರೀಗಳ ಪಾದ ಪೂಜೆ ಸಂಜೆ-4-00 ಕ್ಕೆ ಚಕ್ರಕ್ಕೆ ಕುಂಕುಮಾರ್ಚನೆ ಸಂಜೆ-5-30 ಕ್ಕೆ ಶ್ರೀಗುರುಶಾಂತೇಶ್ವರ ರಥೋತ್ಸವ, ಹಾಗೂ ದೇವಿ ಪಲ್ಲಕ್ಕಿ ಉತ್ಸವ ಸಂಜೆ-6-30 ಕ್ಕೆ ದಸರಾ ಉತ್ಸವ ಕಾರ್ಯಕ್ರಮ ವಿಶೇಷ ಅತಿಥಿಗಳಾದ ಮಠಾಧೀಶರು ಗಣ್ಯಮಾನ್ಯರು ಆಗಮಿಸುವರು ಹಾಗೂ ರಾತ್ರಿ-7-30 ಕ್ಕೆ ಶ್ರೀಗಳ ತುಲಾಭಾರ 8-00 ಕ್ಕೆ ದೀಪೋತ್ಸವ ನಂತರ ಹೋಳಿಗೆ ಊಟ ಮಹಾಪ್ರಸಾದ ನೆರವೇರುವುದು.
ಪೌರೋಹಿತ್ಯ : ವಿದ್ವಾನ್ ಸಂಪತ್ತುಮಾರ ಶಾಸ್ತ್ರೀಗಳು, ವಿದ್ವಾನ್ ಶ್ರೀ ದಿವಾಕರ ಭಟ್ಟ ವಿರಾಜಪೇಟೆ ವೇದ. ಮೂರ್ತಿ.ನಿಶಾಂತ ಶಾಸ್ತ್ರೀಗಳು, ವೇದ. ಮೂರ್ತಿ.ಉದಯ ಶಾಸ್ತ್ರೀಗಳು. ವಿಶೇಷ ಸಂಗೀತ ವಾಯೋಲಿನ್: ನಾದಶ್ರೀ ಷಣ್ಮುಖಯ್ಯ ಸ್ವಾಮಿ ಹಿರೇಮಠ, ಸಾಽಽ ಕಂಚನೆಗಳೂರು, ಸಂಗೀತ: ಕಲ್ಯಾಣಕುಮಾರ ಹಾರಕೂಡ. ಸಾಽಽ ಕಲಬುರಗಿ. ತಬಲಾ ಸಿದ್ದೇಶಕುಮಾರ ಲಿಂಗನಬಂಡಿ. ಸಾಽಽ ಗದಗ ಇವರಿಂದ ವಿಶೇಷ ಸಂಗೀತ ವಾದ್ಯ ಜರುಗುವುದು ದಸರಾ ಉತ್ಸವಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ ಕೋರುವವರು ದಸರಾ ಉತ್ಸವ ಸಮಿತಿ, ಶ್ರೀಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ (ರಿ) ಹಿರೇಮಠ ಹುಕ್ಕೇರಿ ಈ ಸಂದರ್ಭದಲ್ಲಿ ಷ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪರಗೌಡಾ ಪಾಟೀಲ್. ಚನ್ನಬಸಪ್ಪಾ (ಪಿಂಟು)ಶೆಟ್ಟಿ. ಸುಭಾಷ್ ನಾಯಕ. ತಮ್ಮಣ್ಣ ಗೌಡ ಪಾಟೀಲ್ ಶಿವಾನಂದ ಜಿರಲಿ. ಮಲ್ಲಪ್ಪಾ ಪಟ್ಟಣಶೆಟ್ಟಿ. ಎಸ್ ಆಯ್ ಸಂಬಾಳ. ಹಾಗೂ ಹಕ್ಕದಾರರಾದ ನಂದಿ ಕೊಲ್ ಮಠ. ಮಠಪತಿ. ಮಠದಯ್ಯ. ಮಗದುಮ್. ಶಟ್ರು . ಗೌಡ್ರು. ನಾಯಕ್. ಹಾಗೂ ಮಠದ ಸಮಸ್ತ ಸದ್ಭಕ್ತರು ಹಿರೇಮಠದ ದಸರಾ ಉತ್ಸವಕ್ಕೆ ಸರ್ವರಿಗೂ ಸ್ವಾಗತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 