ಮನೆ ಬೆಂಕಿಗೆ ಆಹುತಿ : ಅಂಗವಿಕಲ ದಂಪತಿಗಳಿಗೆ ನೆರವು
House destroyed by fire: Aid for differently-abled couple
ಹೂವಿನಹಡಗಲಿ: ಆ.30. ಪಟ್ಟಣದ ಕಾಯಕನಗರದಲ್ಲಿವಾಸವಿದ್ದ ಅಂಗವಿಕಲ ದಂಪತಿಗಳ ಶೆಡ್ ಸುಟ್ಟು ಹಾನೀಗೀಡಾಗಿದ್ದು ಇಂದು ಶಾಸಕ ಕೃಷ್ಣ ನಾಯಕ ಸೇರಿದಂತೆ ಸಂಘ ಸಂಸ್ಥೆಗಳು ತುರ್ತು ನೆರವು ನೀಡಿದರು.ಶಾಸಕ ಕೃಷ್ಣ ನಾಯಕ ? 50 ಸಾವಿರ ರೂ. ನಗದು ವೈಯಕ್ತಿಕವಾಗಿ ನೀಡುವ ಜೊತೆಗೆ ಸರ್ಕಾರದಿಂದ ದೊರೆಯಬೇಕಾದ ಅಗತ್ಯ ಸೌಲಭ್ಯಗಳನ್ನ ಒದಗಿಸುವುದಾಗಿ ಬರವಸೆ ನೀಡಿದರು. ಧರ್ಮಸ್ಥಳ ಸಂಸ್ಥೆಯ ಜನಜಾಗೃತಿ ಸಮಿತಿಯ ವತಿಯಿಂದ ಹಾಸಿಗೆ ಹೊದಿಕೆ, ಬಟ್ಟೆ ಹಾಗೂ ಇನ್ನಿತರ ಗೃಹ ಉಪಯೋಗಿ ಸಾಮಾನು ನೀಡಿದರು. ಕಿರಾಣಿ ವರ್ತಕರ ಸಂಘದ ಅಧ್ಯಕ್ಷರು ಎಸ್ ಎಮ್ ಅಶೋಕ ಅವರು ಕುಟುಂಬಕ್ಕೆ ಅಗತ್ಯವಿದ್ದ ಒಂದು ತಿಂಗಳ ದಿನಸಿ ಸಾಮಾಗ್ರಿಯ ವಿತರಿಸಿದರು. ಮಹಾದೇವ ತಾತ ಗ್ಯಾಸ್ ಏಜನ್ಸಿಯ ಮುರುಗೇಶ್ ಅವರು ಒಂದು ಸಿಲೆಂಡರ್ ಜೊತೆಗೆ ರೆಗುಲೇಟರ್ ನೀಡಿದರು. ಅಂಗವಿಕಲರ ಸಂಘದ ಅಧ್ಯಕ್ಷ ಎಸ್. ಚಂದ್ರ್ಪ ತಳಕಲ್ ಸ್ಟೋವ್ ಅನ್ನು ನೀಡಿದರು. ಎಸ್ ಎಮ್ ಎನ್ ಫೌಂಡೇಶನ್ ಶಿವರಾಜ್ ಅವರು ಸಹ ನೆರವಿನ ಹಸ್ತ ಚಾಚುವುದಾಗಿ ತಿಳಿಸಿದ್ದಾರೆ.ಧರ್ಮಸ್ಥಳ ಸಂಸ್ಥೆಯ ಜನಜಾಗೃತಿ ಸಮಿತಿಯ ಸದಸ್ಯರಾದ ಕೋಡಿಹಳ್ಳಿ ಕೊಟ್ರೇಶ್, ಸಂತೋಶ್ ಜೈನ್, ಜೆ ಶಿವರಾಜ್, ವರ್ಕನಹಳ್ಳಿ ಸುಬಾಶ್, ಯೋಜನಾಧಿಕಾರಿ ಸುಬ್ರಹ್ಮಣ್ಯ, ವಿಕಲಚೇತನರ ಮಂಜುನಾಥ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 