ಹೊಸಟ್ಟಿ ಬಸವೇಶ್ವರ ರಥೋತ್ಸವ

ಹೊಸಟ್ಟಿ ಬಸವೇಶ್ವರ ರಥೋತ್ಸವ  Hosatti Basaveshwara Chariot Festival


ನೇಸರಗಿ 07: ಇಲ್ಲಿನ ಪ್ರತಿಷ್ಠಿತ ಹೊಸಟ್ಟಿ ಬಸವೇಶ್ವರ ಜಾತ್ರೆ ಹಾಗೂ ರಥೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರ ಸಡಗರ-ಸಂಭ್ರಮದಿಂದ ಅದ್ಧೂರಿಯಾಗಿ ನೆರವೇರಿತು. ಜಾತ್ರೆಯಲ್ಲಿ ನೇಸರಗಿ, ಮೇಕಲಮರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಸವೇಶ್ವರ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾದರು.