ಆನಂದ್ ಲಮಾಣಿ ಅವರಿಗೆ ಗೌರವ ಸನ್ಮಾನ

ಆನಂದ್ ಲಮಾಣಿ ಅವರಿಗೆ ಗೌರವ ಸನ್ಮಾನ  Honorary felicitation for Anand Lamani

ಲೋಕದರ್ಶನ ವರದಿ 

ಶಿಗ್ಗಾವಿ 15: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಾವೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ತಾಲೂಕಿನ ಮಮದಾಪೂರ ಗ್ರಾಮದ ಮುಖಂಡ ಆನಂದ್ ಲಮಾಣಿ ಅವರಿಗೆ ತಾಲೂಕ ಬ್ಲಾಕ್ ಕಾಂಗ್ರೇಸ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್‌ಎಫ್ ಮಣಕಟ್ಟಿ, ಸವಣೂರ ಬ್ಲಾಕ್ ಅಧ್ಯಕ್ಷ ರಮೇಶ್ ಹರಿಜನ್, ಕಾಂಗ್ರೆಸ್ ಮುಖಂಡರಾದ ಚಂದ್ರಣ್ಣ ಹೆಬ್ಬಾಳ,ಸಂತೋಷ ಚಾಕಲಬ್ಬಿ, ಎಸ್ ಸಿ ಘಟಕದ ಅಧ್ಯಕ್ಷ ಪರಮೇಶ್ ಮಾದರ್, ತಾಲೂಕು ಸೇವಾದಳ ಅಧ್ಯಕ್ಷ ಶಿವಾನಂದ್ ಚಾಕಲಬ್ಬಿ, ಅಬ್ಬಾಸಲಿ ಹುಲಗೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.