ಅಗ್ನಿ ವೀರ ಕಾರ್ತಿಕ ಬಸರಿಕಟ್ಟಿಗೆ ಸನ್ಮಾನ ಬೀಳ್ಕೊಡುಗೆ

ಅಗ್ನಿ ವೀರ  ಕಾರ್ತಿಕ ಬಸರಿಕಟ್ಟಿಗೆ ಸನ್ಮಾನ ಬೀಳ್ಕೊಡುಗೆ  Honorable Farewell to Agni Veera Karthika Basarikattti

ಘಟಪ್ರಭ, 15 : ಪಟ್ಟಣದ  ಗಾಂಧಿನಗರದ ನಿವಾಸಿಗಳಾದ ನಿವೃತ್ತ ಸೈನಿಕರಾದ  ಸದಾನಂದ ಬಸರಿಕಟ್ಟಿ ಅವರ ಹಿರಿಯ ಸುಪುತ್ರನಾದ ಕುಮಾರ ಕಾರ್ತಿಕ ಬಸರಿಕಟ್ಟಿ ಈತನು 6 ತಿಂಗಳ ಆರ್ಮಿ ಸೇನೆಯಲ್ಲಿ ತರಬೇತಿಯನ್ನು  ಮುಗಿಸಿ ರಜೆಗೆ ಬಂದ ಪ್ರಯುಕ್ತ   ದೇಶ ಸೇವೆಗೆ ಗುಜರಾತ ರಾಜ್ಯಕ್ಕೆ ಪ್ರಯಾಣ ಬೆಳೆಸಿದರು. ಘಟಪ್ರಭಾದಲ್ಲಿ  ಹೃದಯ ಸ್ಪರ್ಶಿ  ಬೀಳ್ಕೊಡುಗೆ ಸಮಾರಂಭ ನಡೆಯಿತು. ಘಟಪ್ರಭಾದ ಸಮಾಜ ಸೇವಕರಾದ ಶ್ರೀಕಾಂತ ಮಹಾಜನ ಹಾಗೂ ಕರ್ನಾಟಕ ಕನ್ನಡ ಕ್ರಾಂತಿಯ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ  ಕೊಟ್ರೇಶ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪ್ರವೀಣ ಹಾಲುಂಡಿ ಸಂತೋಷ ಚಚಡಿ, ರಮೇಶ ಕರಲಿಂಗಣ್ಣವರ, ರಾಯಪ್ಪಾ ಸಂಗ್ರೋಜಿಕೊಪ್ಪ, ಶಿಲ್ಪಾ ಬುಲಬುಲೆ ಹಾಗೂ  ಬಸರಿಕಟ್ಟಿ ಕುಟುಂಬದ ಸದಸ್ಯರು ಗಾಂಧಿ ನಗರದ ನಿವಾಸಿಗಳು  ಹೃತ್ಪೂರ್ವಕ ಶುಭ ಹಾರೈಸಿ  ಬೀಳ್ಕೊಡುಗೆ ಮಾಡಿದರು, ಕಾರ್ಯಕ್ರಮ ಸಂಯೋಜನೆ ಮಾಡಿದ ಕಲಾವಿದರು ಹಾಗೂ ಸಮಾಜ ಸೇವಕರಾದ ಸವಿತಾ ಪಟ್ಟಣಶೆಟ್ಟಿ  ಕಾರ್ಯಕ್ರಮ ನಿರೂಪಣೆ ಮಾಡಿದರು.