40 ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ನರಳುತ್ತಿರುವ ಹೊಂಬಳನಾಕಾ ಜನತಾ ಕಾಲೊನಿ
Hombalanaka Janata Colony: Suffering without basic infrastructure for 40 years
ಗದಗ, ಆಗಸ್ಟ್ 14: ದೇಶದೆಲ್ಲೆಡೆ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದರೂ, ಗದಗ-ಬೆಟಗೇರಿ ನಗರಸಭೆ ವಾರ್ಡ್ ನಂ.16ರ ಹೊಂಬಳನಾಕಾ ಜನತಾ ಕಾಲೊನಿ ನಿವಾಸಿಗಳ ಕಣ್ಣೀರು ಮಾತ್ರ ಇನ್ನೂ ಆರಿಲ್ಲ. ಕಳೆದ ನಾಲ್ಕು ದಶಕಗಳಿಂದ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿರುವ ಇಲ್ಲಿನ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಯಾವಾಗ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.
ಬಡವರ ಪರ ಧ್ವನಿ ಎತ್ತುವ ಹಾಗೂ ಜನಪ್ರಿಯ ಶಾಸಕರಾಗಿರುವ ಸಚಿವ ಎಚ್.ಕೆ. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾಲೊನಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ಪರೀಶೀಲಿಸಬೇಕು ಎಂದು ಹೊಂಬಳನಾಕಾ ಜನತಾ ಕಾಲೊನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಎಚ್. ಹಡಪದ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಗದಗ ಮತಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗುವಂತೆ ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಶಪಥ ಮಾಡಿರುವ ಶಾಸಕ ಎಚ್.ಕೆ. ಪಾಟೀಲ ಅವರ ಮೇಲೆ ಕಾಲೊನಿಯ ಬಡ ಜನರಿಗೆ ಅಪಾರ ವಿಶ್ವಾಸವಿದೆ. ಆದರೆ, ಜನರು ಎದುರಿಸುತ್ತಿರುವ ಮೂರು ಪ್ರಮುಖ ಸಮಸ್ಯೆಗಳು ತಕ್ಷಣವೇ ಗಮನ ಸೆಳೆಯುವಂತಿವೆ.
ಆಂಬ್ಯುಲೆನ್ಸ್ ಬರಲಾರದ ರಸ್ತೆಗಳು: ಕಾಲೊನಿಯಲ್ಲಿ ರಸ್ತೆಗಳಿದ್ದರೂ ಅವು ಪರಸ್ಪರ ಸಂಪರ್ಕ ಹೊಂದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಸಣ್ಣ ಆಂಬ್ಯುಲೆನ್ಸ್ ಕೂಡ ಒಳಗೆ ಬರಲು ಸಾಧ್ಯವಾಗದ ಸ್ಥಿತಿ ಇದೆ. ವಾಹನ ಬಂದರೂ ರಿವರ್ಸ್ ಮಾಡಿಕೊಂಡು ಹೊರಬರಬೇಕಾದಷ್ಟು ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯಪೀಡಿತರನ್ನು ಹಾಗೂ ಹೆರಿಗೆ ನೋವಿನಿಂದ ಬಳಲುವ ಗರ್ಭಿಣಿಯರನ್ನು ಮುಖ್ಯ ರಸ್ತೆಯವರೆಗೆ ಹೊತ್ತುಕೊಂಡು ಹೋಗಬೇಕಾದ ಅಮಾನವೀಯ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ಒಳಚರಂಡಿ ವ್ಯವಸ್ಥೆಯ ಕೊರತೆ: ಕಾಲೊನಿಗೆ ಸಮರ್ಕ ಒಳಚರಂಡಿ ಸಂಪರ್ಕವೇ ಇಲ್ಲ. ಮನೆಗಳ ತ್ಯಾಜ್ಯ ನೀರು ಹಾಗೂ ಮಲಮೂತ್ರ ರಸ್ತೆ ಬದಿಯಲ್ಲೇ ಹರಿಯುತ್ತಿದ್ದು, ನಿವಾಸಿಗಳು ದುರ್ವಾಸನೆ ಮತ್ತು ಅನಾರೋಗ್ಯಕರ ವಾತಾವರಣದಲ್ಲಿ ಬದುಕುವಂತಾಗಿದೆ. ಮಕ್ಕಳ ಆರೋಗ್ಯದ ಮೇಲೂ ಇದರ ಪರಿಣಾಮ ಬೀರುತ್ತಿದೆ.
ತಡೆಗೋಡೆಯಿಲ್ಲದ ರಾಜಕಾಲುವೆ: ಗದಗ ನಗರದ ಅರ್ಧ ಭಾಗದ ಕೊಳಚೆ ನೀರು ಹರಿದುಬರುವ ಬೃಹತ್ ರಾಜಕಾಲುವೆ ಕಾಲೊನಿಯ ಮೂಲಕ ಸಾಗುತ್ತದೆ. ಇದಕ್ಕೆ ಯಾವುದೇ ತಡೆಗೋಡೆ ಇಲ್ಲದಿರುವುದರಿಂದ ಸಣ್ಣ ಮಳೆಯಾದರೂ ಕೊಳಚೆ ನೀರು ಉಕ್ಕಿ ಬಡವರ ಮನೆಗಳಿಗೆ ನುಗ್ಗುತ್ತದೆ.
ಧವಸ-ಧಾನ್ಯ ಹಾಗೂ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗುತ್ತಿವೆ. ಈಗಾಗಲೇ ಹಲವು ಮನೆಗಳು ಕುಸಿದು ಬಿದ್ದಿದ್ದು, ಈ ಪ್ರದೇಶ ಮಾನವ ವಾಸಕ್ಕೆ ಅಯೋಗ್ಯವಾಗುವ ಜೊತೆಗೆ ವಿಷಜಂತುಗಳು ಹಾಗೂ ಕಾಡುಪ್ರಾಣಿಗಳ ಆಶ್ರಯಸ್ಥಾನವಾಗುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 