ಯರಗಟ್ಟಿಯಲ್ಲಿ ಪ್ರೌಢಶಾಲಾ ಕ್ರೀಡಾಕೂಟ

ಯರಗಟ್ಟಿಯಲ್ಲಿ ಪ್ರೌಢಶಾಲಾ ಕ್ರೀಡಾಕೂಟ High School Sports Meet in Yaragatti

ಲೋಕದರ್ಶನ ವರದಿ 

 ಯರಗಟ್ಟಿ 23 : ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಓದಿನ ಜತೆಗೆ ಕ್ರೀಡಾಕೂಟಕಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಆಸಕ್ತಿ ಬೆಳಿಸಿಕೊಳ್ಳಬೇಕು. ಕ್ರೀಡೆಗಳಿಂದ ಆರೋಗ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎಂದು ಸವದತ್ತಿ ದೈಹಿಕ ಶಿಕ್ಷಣಾಧಿಕಾರಿ ಸಂತೋಷ ಬಿರಾಜನವರ ಹೇಳಿದರು.  ಪಟ್ಟಣದ ಮರಡಿ ಬಸವೇಶ್ವರ ವಿದ್ಯಾ ಪ್ರಸಾರ ಮಂಡಳಿಯ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಕ್ರೀಡಾಂಗಣದಲ್ಲಿ ಯರಗಟ್ಟಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸಬೆಕು ಎಂದು ಹೇಳಿದರು.

ಸಿಆರ್‌ಪಿ ವಿ.ಎಸ್‌.ಬಡಿಗೇರ ಮಾತನಾಡಿ, ದೈಹಿಕ ಸದೃಢತೆಗೆ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಪ್ರತಿಯೊಬ್ಬರಿಗೂ ಅವಶ್ಯ ಎಂದರು. ಶಿಕ್ಷಕ ಗೀರೀಶ ಸೊಪ್ಪಡ್ಲ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು, ದೈಹಿಕ ಶಿಕ್ಷಕ ಮಹೇಶ ಚವಡಪ್ಪನವರ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋದಿಸಿದರು.  ಸಂಸ್ಥೆ ಅಧ್ಯಕ್ಷ ಆರ್‌.ಜಿ.ದೇವರೆಡ್ಡಿ, ಉಪಾಧ್ಯಕ್ಷ ಎಂ.ಬಿ.ತಡಸಲೂರ, ಎನ್‌.ಎಸ್‌.ಸಿದ್ನಾಳ, ಮುಖ್ಯಶಿಕ್ಷಕರು ಮಂಜುನಾಥ ಕೆ.ಬಿ, ಪ್ರೌಢಶಾಲೆ ಮುಖ್ಯಶಿಕ್ಷಕರು ಎಂ.ಬಿ.ಆಲದಕಟ್ಟಿ, ಸಂಕೇತ ಗೌಡರ, ಶಬ್ಬೀರ ನದಾಫ್, ರಜಿಯಾ ಮೆಡಂ, ಎಸ್‌.ಎಂ.ಹಂಜಿ ಪ್ರಕಾಶ ಚುಂಚನೂರ, ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.