ಪ್ರಜ್ವಲ ಟ್ರಸ್ಟ್‌ನಿಂದ ಬಡರೋಗಿಗೆ ಸಹಾಯ
Help for poor patient from Prajwala Trust
ಶಿರಸಿ 12: ಕ್ಯಾನ್ಸರ್ ಪೀಡಿತೆ ಹಾಗೂ ಹೃದಯ ರೋಗದಿಂದ ಬಳಲುತ್ತಿರುವ ಚವತ್ತಿಯ ಆಶಾದೇವಿ ಹೆಗಡೆ ಅವರ ಮನೆಗೆ ಪ್ರಜ್ವಲ ಟ್ರಸ್ಟ್ (ರಿ.), ಶಿರಸಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿದರಲ್ಲದೆ, ತೀರ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ಆಶಾದೇವಿ ಅವರಿಗೆ ಸಾಂತ್ವನ ಹೇಳಿ ಓಷದೊಪಚಾರಕ್ಕಾಗಿ ಧನ ಸಹಾಯವನ್ನು ಮಾಡಿದರು.
ಪದಾಧಿಕಾರಿಯಾದ ಸರಸ್ವತಿ ಕಂಬಾರ ಅವರು ವೈಯಕ್ತಿಕವಾಗಿಯೂ ಧನ ಸಹಾಯ ನೀಡಿದರು. ಅಧ್ಯಕ್ಷೆ ಬಿಂದು ಹೆಗಡೆ, ಮುದ್ರೆ, ಪ್ರಾಣಾಯಾಮ, ಆಧ್ಯಾತ್ಮ ಚಿಂತನೆಗಳ ಬಗೆಗೆ ತಿಳುವಳಿಕೆ ನೀಡಿದರು.ಟ್ರಸ್ಟಿನ ನಿಕಟವರ್ತಿಗಳೂ, ಕಲಾವಿದರೂ, ತಬಲಾವಾದಕರೂ ಆದ ಕಿರಣ ಹೆಗಡೆ ಕಾನಗೋಡ ಅವರು ಈ ಸೇವಾ ಕಾರ್ಯವನ್ನು ಆಯೋಜಿಸಿದ್ದರು.ಟ್ರಸ್ಟಿನ ಅಧ್ಯಕ್ಷರಾದ ಬಿಂದು ಹೆಗಡೆ, ಕಾರ್ಯದರ್ಶಿ ಸುಮಾ ಹೆಗಡೆ, ಸರಸ್ವತಿ ಕಂಬಾರ, ಸುಜಾತಾ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 