ಕಾರವಾರ

ಲಾರಿ ಚಾಲಕರ, ನಿರ್ವಾಹಕರ ಆರೋಗ್ಯ ಶಿಬಿರ

ಲಾರಿ ಚಾಲಕರ, ನಿರ್ವಾಹಕರ ಆರೋಗ್ಯ ಶಿಬಿರ

ಲೋಕದರ್ಶನ ವರದಿ 

ದಾಂಡೇಲಿ 06: ಟ್ರಾನ್ಸೊ-್ಪರ್ಟ್‌ ಆಪರೇಟರ​‍್ಸ‌ ಅಸೋಸಿಯೇಶನ್ ಮತ್ತು ಎಕಲ್ ಅಭಿಯಾನ ಸಂಸ್ಥೆಯ ಆಶ್ರಯದಡಿ ಹಳಿಯಾಳ ರಸ್ತೆಯ ಮೂರು ನಂಬರ ಗೇಟ್ ಬಳಿ ಲಾರಿ ಚಾಲಕರ ಮತ್ತು ನಿರ್ವಾಹಕರ ಆರೋಗ್ಯ ಶಿಬಿರವನ್ನು ದಾಂಡೇಲಿಯಲ್ಲಿ ಎರಿ​‍್ಡಸಲಾಗಿತ್ತು.  

ಈ ಶಿಬಿರವನ್ನು ಬೆಳಗಾವಿಯ ಏಕಲ್ ಅಭಿಯಾನದ ಪ್ರಮುಖರಾದ ಡಾ. ವೈಶಾಲಿಯವರು ಉದ್ಘಾಟಿಸಿ ಮಾತನಾಡಿ ಲಾರಿ ಚಾಲಕರು ಶ್ರಮ ಜೀವಿಗಳಾಗಿದ್ದು, ಅವರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ ಈ ಹಿನ್ನೆಲೆಯಲ್ಲಿ ನಡೆದಿರುವ ಈ ಶಿಬಿರದ ಪ್ರಯೋಜನ ಲಾರಿ ಚಾಲಕರು ಮತ್ತು ನಿರ್ವಾಹಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.  

ದಾಂಡೇಲಿಯ ಟ್ರಾನ್ಸೊ-್ಪರ್ಟ್‌ ಆಪರೇಟರ​‍್ಸ‌ ಅಸೋಸಿಯೇಶನ್ ಅಧ್ಯಕ್ಷ ಅಷತೋಶ್‌ಕುಮಾರ ರಾಯ್ ಅಧ್ಯಕ್ಷತೆವಹಿಸಿದ್ದರು ಶಿಬಿರದಲ್ಲಿ 60ಕ್ಕೂ ಚಾಲಕರು ಮತ್ತು ನಿರ್ವಾಹಕರಿಗೆ ಬಿ.ಪಿ. ಸಕ್ಕರೆ ಖಾಯಿಲೆ, ಕಣ್ಣು ಮತ್ತು ಇನ್ನಿತರ ಖಾಯಿಲೆಗಳ ಕುರಿತು ಆರೋಗ್ಯ ತಪಾಸಣೆ ನಡೆಸಲಾಯಿತು.

ಶಿಬಿರದಲ್ಲಿ ರಾಮನಗರದ ಡಾ. ಬಸವರಾಜ, ವಸಂತ ಬಾಳಿಗಾ, ದಾಂಡೇಲಿ ಏಕಲ್ ಅಭಿಯಾನದ ಅಧ್ಯಕ್ಷ ಮುರುಳಿಧರ ಗೋಶಿ ಏಕಲ್ ಆರೋಗ್ಯ ಸೇವಾ ಕೇಂದ್ರದ ಲ್ಯಾಬ್ ತಂತ್ರಜ್ಞೆ ರಮಾ ಗೋಲಂ ಮತ್ತಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ