ಕೈ ಭದ್ರ, ಬಿಜೆಪಿ ಆಸೆ ಛಿದ್ರ, ಹೈಕಮಾಂಡಿಗೆ ಕಾರ್ಯಕರ್ತರು ಬದ್ಧ - ಜ್ಯೋತಿ
Hands are strong, BJP's hopes are shattered, workers are committed to the high command - Jyoti
ಲೋಕದರ್ಶನ ವರದಿ
ಕೊಪ್ಪಳ 28: ರಾಜ್ಯ ಕಾಂಗ್ರೆಸ್ ಸರಕಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಮಾನ್ಯ ಜನರಿಗೆ ಆಸರೆಯಾಗುವಂತೆ ಉತ್ತಮ ಆಡಳಿತ ನಡೆಸಿದ್ದು ಮುಂದೆಯೂ ಅದನ್ನು ಅವರ ಮಾರ್ಗದರ್ಶನದಲ್ಲಿಯೇ ಡಿ.ಕೆ. ಶಿವಕುಮಾರ್ ಅವರು ನಡೆಸಲಿದ್ದಾರೆ ಎಂದು ಜಿಲ್ಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಪ್ರಸ್ತುತ ಸಿದ್ದರಾಮಯ್ಯ ಅವರ ನಡೆಯಿಂದ ಅವರ ಮೇಲೆ ನನಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಅಭಿಮಾನ ತುಂಬಾ ಜಾಸ್ತಿಯಾಗಿದೆ, ಅವರು ಪಕ್ಷದ ವರ್ಚಸ್ಸಿಗೆ ಯಾವುದೇ ರೀತಿ ದಕ್ಕೆಯಾಗದಂತೆ ನಡೆದುಕೊಂಡ ರೀತಿ ಕೈ ಕಾರ್ಯಕರ್ತರಲ್ಲಿ ಉತ್ಸಾಹ ತಂದಿದೆ. ಇದೇ ವೇಳೆ ಬಿಜೆಪಿ ನಾಯಕರು ಏನಾದರೂ ಆಗುತ್ತಾ ಎಂದು ಆಸೆಗಣ್ಣಿನಿಂದ ಕಾದು ಕುಳಿತಿದ್ದರು, ಆದರೆ ಪ್ರಬುದ್ಧ ನಡೆಯನ್ನಿಟ್ಟ ಸಿದ್ದರಾಮಯ್ಯ ಅವರು ಮುಂದೆಯೂ ಕಾಂಗ್ರೆಸ್ ಗೆಲ್ಲುವ ಹಾಗೆ ಮಾಡಿದ್ದಾರೆ.
ಬಿಜೆಪಿ ಇಷ್ಟು ದಿನ ಡಿಕೆ ಶಿವಕುಮಾರ ರವರಿಗೆ ಅಧಿಕಾರ ಸಿಗಲ್ಲ ಎಂದು ಪ್ರತಿ ದಿನ ಬೊಬ್ಬೆ ಇಡುತ್ತಿದ್ದರು, ಈಗ ಒಬಿಸಿ ನಾಯಕನನ್ನು ಕೆಳಗಿಳಿಸಿದ ಕಾಂಗ್ರೆಸ್ ಎಂದು ಬೊಬ್ಬೆ ಇಡುತ್ತಿದೆ, ಅದು ಕೇವಲ ಸಂಕಷ್ಟದ ಮನೆಯಲ್ಲಿ ಬಿಸಿ ಕಾಯಿಸಿಕೊಳ್ಳುವ ಜಾಯಮಾನದ ಪಕ್ಷ ಎಂದು ಸಾಬೀತುಪಡಿಸಿದ್ದು, ಬಿಜೆಪಿ ಒಬಿಸಿ, ಎಸ್.ಸಿ., ಎಸ್.ಟಿ., ಅಹಿಂದ ಯಾವ ಪದ ಬಳಸಲೂ ಸಹ ನೈತಿಕತೆ ಉಳಿಸಿಕೊಂಡಿಲ್ಲ. ಕೋಮು ಸಂಘರ್ಷ ಅದರ ನಿಜವಾದ ರಾಜಕೀಯ ಬಂಡವಾಳವಾಗಿದೆ, ಬಿಜೆಪಿಯವರು ಕಾಂಗ್ರೆಸ್ ಯಾರನ್ನು ಸಿಎಂ ಮಾಡಬೇಕು ಎಂಬುದನ್ನು ಹೇಳುವದನ್ನು ಬಿಟ್ಟು ತಮ್ಮ ಪಕ್ಷವನ್ನು ನೋಡಿಕೊಳ್ಳಲಿ.
ಇದರ ಜೊತೆಗೆ ಕೊಪ್ಪಳ ಜಿಲ್ಲೆಗೆ ಮೊದಲ ಬಾರಿಗೆ ಎರಡು ಸಚಿವ ಸ್ಥಾನದ ಯೋಗ ಬಂದಿದ್ದು, ಶಾಸಕ ಸಹೋದರ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವರಾಗುವ ಯೋಗ ಬಂದಿದೆ ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಮತ್ತು ಪ್ರಸ್ತುತ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷ್ಷರಾಗಿ ಕೆಲಸ ಮಡಿದ ಅನುಭವ ಮತ್ತು ಹೊಸ ನಾಯಕರ ಉದಯಕ್ಕೆ ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸವಿದೆ, ಈಗಾಗಲೆ ಸಚಿವರಾಗಿರುವ ಸಹೋದರ ಶಿವರಾಜ ತಂಗಡಗಿ ಅವರು ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ಅವರ ಸ್ಥಾನವೂ ಉಳಿಯುತ್ತದೆ ಎಂಬ ಭರವಸೆಯನ್ನು ಜ್ಯೋತಿ ಎಂ. ಗೊಂಡಬಾಳ ವ್ಯಕ್ತಪಡಿಸಿದ್ದಾರೆ.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 