ಹೆಬ್ಬಾರರ ಕೈ ಹಿಡಿದ ಅಭಿವೃದ್ಧಿ ಕಾರ್ಯಗಳು
ನಾಗರಾಜ ಹರಪನಹಳ್ಳಿ
ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಮಲ ಅರಳಿದೆ. ಕೈ ಪಕ್ಷ ಗಣನೀಯ ಮತಗಳನ್ನು ಪಡೆದಿದೆ. ಗೆಲುವು ಬಿಜೆಪಿ ಪಕ್ಷದ್ದಾಗಿದ್ದು, ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಿವರಾಮ ಹೆಬ್ಬಾರ ಮಾತೃಪಕ್ಷದಿಂದ ಶಾಸಕನಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಶಿವರಾಮ ಹೆಬ್ಬಾರರ ಜೊತೆ ಅವರ ಅಭಿಮಾನಿ ಬಳಗವೇ ಅವರ ಗೆಲುವಿಗೆ ದುಡಿದಿತ್ತು. ಜೊತೆಗೆ ಬಿಜೆಪಿಯ ಕಾರ್ಯಕರ್ತರ ಶಕ್ತಿ ಹಾಗೂ 2018ರಲ್ಲಿ ಬಿಜೆಪಿ ಅಭ್ಯಥರ್ಿಯಾಗಿ ಕೇವಲ 1483 ಮತಗಳ ಅಂತರದಿಂದ ಸೋತ್ತಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ ಸಹ ಶಿವರಾಮ ಹೆಬ್ಬಾರರ ಜೊತೆ ನಿಂತರು. ಯಡಿಯೂರಪ್ಪ ಬನವಾಸಿ ಮತ್ತು ಮುಂಡಗೋಡಗೆ ಎರಡು ಸಲ ಬಂದು ಹೆಬ್ಬಾರರಿಗೆ ಮತ ನೀಡಿ. ಮಂತ್ರಿ ಮಾಡ್ತೀನಿ ಎಂಬ ಭರವಸೆ ಹೆಬ್ಬಾರರ ಗೆಲುವಿನ ಹಾದಿಯನ್ನು ಸುಗಮ ಮಾಡಿದವು. ಹೆಬ್ಬಾರರು ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದವರು. ಹದಿನೆಂಟು ವರ್ಷಗಳ ಹಿಂದೆ ಅವರು ಬಿಜೆಪಿಯಲ್ಲಿ ಕ್ರಿಯಾಶೀಲರಾಗಿ ಪಕ್ಷ ಕಟ್ಟಿದವರು. ಆಗಿನ ಬಿಜೆಪಿಯಲ್ಲಿನ ಅಂತರಿಕ ಒತ್ತಡ ಮತ್ತು ಭಿನ್ನಾಭಿಪ್ರಾಯದಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿ ಯಲ್ಲಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪಧರ್ಿಸಿದರು.
ಮೊದಲ ಯತ್ನದಲ್ಲಿ ಹೆಬ್ಬಾರರು ಶಾಸಕರಾಗಲು ಯತ್ನಿಸಿ ಸೋತರು. ಛಲ ಬಿಡದ ಅವರು 2013 ಮತ್ತು 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಯಲ್ಲಾಪುರ ಕ್ಷೇತ್ರ ಪ್ರತಿನಿಧಿಸಿದ್ದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಬನವಾಸಿ ಭಾಗದಲ್ಲಿ ಮಾಡಿದ ನೀರಾವರಿ ಕಾಮಗಾರಿಗಳು, ಉತ್ತಮ ರಸ್ತೆಗಳು ಇದೀಗ ಮುಗಿದ ಉಪ ಚುನಾವಣೆಯಲ್ಲಿ ಹೆಬ್ಬಾರರ ನೆರವಿಗೆ ಬಂದವು. ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಅನರ್ಹ ಎಂಬ ಪಟ್ಟಿ ಕಟ್ಟಿಕೊಂಡರು. ಸುಪ್ರಿಂನಲ್ಲಿ ಉಪ ಚುನಾವಣೆಯಲ್ಲಿ ಸ್ಪಧರ್ಿಸಲು ಅವಕಾಶ ಸಿಕ್ಕದ್ದೇ ತಡ ಬಿಜೆಪಿ ಟಿಕೆಟ್ ಪಡೆದು ಸ್ಪಧರ್ಿಸಿದರು. ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಗ ಗೆಲುವು ಸಾಧಿಸಿದರು.
ಮಂತ್ರಿ ಪದವಿ ಮತ್ತು ಅಭಿವೃದ್ಧಿ ಜಪ ಹೆಬ್ಬಾರರನ್ನು ಮತ್ತೆ ವಿಧಾನಸಭೆಗೆ ಕಳಿಸಲು ನೆರವಾಗಿವೆ. ಶಿವರಾಮ ಹೆಬ್ಬಾರನ್ನು ಹವ್ಯಕರ ಜೊತೆಗೆ ಲಿಂಗಾಯತರು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ. ಇದಕ್ಕೆ ಕಾರಣ ಮಾಜಿ ಶಾಸಕ ವಿ.ಎಸ್.ಪಾಟೀಲ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಕಾರಣ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಶಾಸಕರ ಸಂಖ್ಯೆ ಸಹ ಮುಖ್ಯ. ಹಾಗಾಗಿ ಹೆಬ್ಬಾರರನ್ನು ಈ ನಿಟ್ಟಿನಿಂದಲೂ ಬೆಂಬಲಿಸಿದರು. ಉಳಿದಂತೆ ಅಹಿಂದ ಮತಗಳು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಹಂಚಿಕೆಯಾಗಿರುವುದು ಮತದಾನದ ಮಾದರಿ ನೋಡಿದಲ್ಲಿ ಸ್ಪಷ್ಟವಾಗುತ್ತದೆ.
ಗೆಲುವಿಗೆ ಮುಖ್ಯ ಮೂರು ಕಾರಣಗಳು :
ಮುಖ್ಯವಾಗಿ ಬಿಜೆಪಿ ಅಭ್ಯಥರ್ಿ ಶಿವರಾಮ ಹೆಬ್ಬಾರರ ಗೆಲುವಿಗೆ ಕಾರಣ 2013 ರಿಂದ 2017ರಲ್ಲಿ ಬನವಾಸಿ ಮತ್ತು ಯಲ್ಲಾಪುರ ಕ್ಷೇತ್ರದಲ್ಲಿ ಮಾಡಿದ ಕೆಲಸಗಳು ಮೊದಲ ಕಾರಣ. ಬಿಜೆಪಿಯ ಸಂಘಟಿತ ಯತ್ನ ಹಾಗೂ ಪ್ರಚಾರದಲ್ಲಿನ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಮುಂದೆ ಇದ್ದುದು ಎರಡನೇ ಕಾರಣ.
ಮೂರನೇ ಕಾರಣ ಹೆಬ್ಬಾರರ ವಿರುದ್ಧ ಪದೇ ಪದೇ ಅನರ್ಹ ಪದ ಬಳಕೆ ಮಾಡಿದ್ದು ಹಾಗೂ ಹನಿಟ್ರಾಪ್ ಹಗರಣದಲ್ಲಿ ಶಾಸಕರ ವಿರುದ್ಧ ವಾರಪತ್ರಿಕೆಯೊಂದು ಸುದ್ದಿ ಪ್ರಕಟಿಸಿದ್ದು. ಮೂರನೇ ಕಾರಣದಲ್ಲಿನ ಋಣಾತ್ಮಕ ಅಂಶಗಳನ್ನು ವಿರೋಧಿಗಳು ಬಳಸಿದ್ದರಿಂದ ಮೂಲ ಬಿಜೆಪಿಗರು ಹಾಗೂ ಹೆಬ್ಬಾರರ ಅಭಿಮಾನಿಗಳು ಹಠಕ್ಕೆ ಬಿದ್ದು, ಗೆಲುವಿಗೆ ಶ್ರಮಿಸಿದರು.
ಸೋಲಿಗೆ ಮುಖ್ಯ ಮೂರು ಕಾರಣಗಳು:
ಕಾಂಗ್ರೆಸ್ ಪಕ್ಷದಲ್ಲಿ ಸಂಘಟಿತ ಪ್ರಚಾರ ಮತ್ತು ಹೋರಾಟದ ಮನೋಭಾವದ ಕೊರತೆ ಇತ್ತು. ಎರಡನೇದಾಗಿ ಕಾಂಗ್ರೆಸ್ ಪಕ್ಷದಲ್ಲಿ ಆಥರ್ಿಕ ಸಂಪನ್ಮೂಲದ ಕೊರತೆ ಹಾಗೂ ಇದ್ದ ಸಂಪನ್ಮೂಲವನ್ನು ಸರಿಯಾಗಿ ಹಂಚದೇ ಇದ್ದುದು. ಮೂರನೇ ಕಾರಣ ಭೀಮಣ್ಣ ನಾಯ್ಕ ಶಿರಸಿಯವರು, ಅವರು ಆಯ್ಕೆಯಾದರೂ ಅವರ ಅವಧಿಯಲ್ಲಿ ಸಚಿವರಾಗುವುದು ಸಾಧ್ಯತೆಗಳಿಲ್ಲ ಎಂಬ ಭಾವನೆ ಕ್ಷೇತ್ರದ ಮತದಾರರಲ್ಲಿ ಇತ್ತು. ಇವು ಕಾಂಗ್ರೆಸ್ ಪಕ್ಷದ ಸೋಲಿಗೆ ಮುಖ್ಯ ಕಾರಣಗಳು.