ಹೆಚ್ ಡಿ ದೇವೆಗೌಡರವರ ಹುಟ್ಟು ಹಬ್ಬ : ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಹೆಚ್ ಡಿ ದೇವೆಗೌಡರವರ  ಹುಟ್ಟು ಹಬ್ಬ : ರೋಗಿಗಳಿಗೆ ಹಣ್ಣು ಹಂಪಲು ವಿತರಣೆ HD Deve Gowda's birthday: Fruits and sweets distributed to patients

        ಹಾವೇರಿ  19: ಹೇಮಾವತಿಯ ವರ ಪುತ್ರ ರಾಜಕೀಯ ಭೀಷ್ಮ,ದೇಶ ಕಂಡ ಅಪ್ರತಿಮ ನಾಯಕ,ಸೂರ್ಯರತ್ನ ಪ್ರಶಸ್ತಿ ಹಾಗೂ ಬಸವ ಪ್ರಶಸ್ತಿ ಪುರಸ್ಕೃತರು,ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಏಕೈಕ ಕನ್ನಡಿಗ ಮಾಜಿ ಪ್ರಧಾನಮಂತ್ರಿಗಳಾದ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯರಾದ ಹೆಚ್ ಡಿ ದೇವೆಗೌಡರವರ 94ನೇ ವರ್ಷದ ಹುಟ್ಟು ಹಬ್ಬವನ್ನು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್‌.ಸಿದ್ಧಬಸಪ್ಪ ಯಾದವ ನೇತೃತ್ವದಲ್ಲಿ ತಾಲೂಕ ಗುತ್ತಲ ಪಟ್ಟಣದ ಶ್ರೀ ಸಿದ್ಧೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.          

        ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್‌.ಸಿದ್ಧಬಸಪ್ಪ ಯಾದವ ಅವರು ಮಾತನಾಡಿ ಹೆಚ್‌.ಡಿ ದೇವೆಗೌಡರರವರು ಪ್ರಧಾನ ಮಂತ್ರಿಗಳಾದ ಸಂರ್ಭದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ರೇಲ್ವೆ ವಲಯ ಹುಬ್ಬಳ್ಳಿ ರೇಲ್ವೆ ವರ್ಕಶಾಪಿಗೆ ಕಾಯಕಲ್ಪ ನೀಡಿದರು. 11 ತಿಂಗಳಲ್ಲಿ ರಾಜ್ಯದಲ್ಲಿ 1000 ಕೀ ಮೀ ರೈಲು ಮಾರ್ಗ,ಆಲಮಟ್ಟಿ ಆಣೆಕಟ್ಟಿನ ಎತ್ತರದ ಹೆಚ್ಚಳ,ಉತ್ತರ ಕರ್ನಾಟಕಕ್ಕೆ 17ಹೊಸ ಸಕ್ಕರೆ ಕಾರ್ಖಾನೆಗಳು.ರಾಜ್ಯದ ಯು,ಕೆ,ಪಿಗೆ ಕೇಂದ್ರದಿಂದ ಹಣಕಾಸಿನ ನೆರವು ನೀಡಿದರು.ರಕ್ಷಣಾ ಇಲಾಖೆ ಜಾಗ ಬಿಬಿಎಮ್‌ಪಿ ಗೆ ಹಸ್ತಾಂತರ,ಬಡವರಿಗೆಲ್ಲ ಪಡಿತರ ಅನ್ನಭಾಗ್ಯ,ಬೆಂಗಳೂರಿಗೆ ಭಗೀರಥರಾದ ದೇವೆಗೌಡರು ಭದ್ರಾವತಿ ಉಕ್ಕಿನ ಕಾರ್ಖಾನೆ,ರಾಜ್ಯದ ಕೇಂದ್ರ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಕಾಯಕಲ್ಪ ನೀಡಿದರು.

        ಬೆಂಗಳೂರಿಗೆ ಮೂಲಸೌಕರ್ಯ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಿದ್ದರು.ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಅವರಿಗೆ ದೇವರು ಆರೋಗ್ಯ ಆಯುಷ್ಯ ಹೆಚ್ಚಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ ಎಂದರು.  ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಪ್ರಭಾಕರ ಕುಂದೂರ ಡಾ. ದೀಪ್ತಿ ಮಮದಾಪುರ, ಡಾ. ಬೀರೇಶ, ಡಾ. ವಿದ್ಯಾ ಅನಂತರಡ್ಡಿ,ಕೃಷ್ಣಪ್ಪ ಕನ್ನಮ್ಮನವರ,ಲಿಂಗರಾಜ, ಮಾಲತೇಶ ಪುಟ್ಟನಗೌಡ್ರ,ರಜಾಕಸಾಬ ಕೊಕ್ಕರಗುಂದಿ,ರಾಜು ನದಾಫ ಸೇರಿದಂತೆ ಅನೇಕರಿದ್ದರು.